ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಪ್ರಖ್ಯಾತ ಕೊಳಲು ವಾದಕ ವಿದ್ವಾನ್ ಚಂದನ್ ಕುಮಾರ್ ಮೈಸೂರು ಅವರಿಂದ `ವೇಣುವಾದನ' ಕಾರ್ಯಕ್ರಮ ಇಂದು ನಡೆಯಲಿದೆ. ಸುನಾದ ಸಂಗೀತ ಕಲಾಶಾಲೆಯ ಸಂಗೀತೋತ್ಸವ 2019 ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 8 ಕ್ಕೆ ಬಿ.ವಸಂತ ಪೈ ಬದಿಯಡ್ಕ ಅವರು ದೀಪೋಜ್ವಲನೆಗೈದು ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡುವರು. ಗುರುವಂದನೆ, ಸಂಗೀತ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ವಿದ್ವಾನ್ ಪ್ರಭಾಕರ ಕುಂಜಾರು, ಕು.ಧನ್ಯಶ್ರೀ ಪುತ್ತೂರು, ವಿಜೇತ ಸುಬ್ರಹ್ಮಣ್ಯ ಕೆ., ವಿದ್ವಾನ್ ಶ್ಯಾಂಭಟ್ ಸುಳ್ಯ, ವೆಂಕಟ ಯಶಸ್ವಿ ಕೆ., ಭರತ್ ಕುಮಾರ್ ಸುಳ್ಯ ಪಕ್ಕವಾದ್ಯಗಳಲ್ಲಿ ಜೊತೆಗೂಡಲಿದ್ದಾರೆ. ಸಂಜೆ 5 ಗಂಟೆಗೆ ವಿದ್ವಾನ್ ಚಂದನ್ ಕುಮಾರ್ ಮೈಸೂರು ಅವರಿಂದ ವೇಣುವಾದನ ಜರಗಲಿದೆ. ವಯಲಿನ್‍ನಲ್ಲಿ ವಿದ್ವಾನ್ ಅಟ್ಟುಕಾಲ್ ಬಾಲಸುಬ್ರಹ್ಮಣ್ಯ ತಿರುವನಂತಪುರ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಪುತ್ತೂರು, ಘಟಂನಲ್ಲಿ ವಿದ್ವಾನ್ ಉಡುಪಿ ಶ್ರೀಧರ್ ತಿರುವನಂತಪುರ ಸಾಥ್ ನೀಡಲಿದ್ದಾರೆ.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿದ್ವಾನ್. ಚಂದನ್ ಕುಮಾರ್ ಅವರಿಂದ ವೇಣುವಾದನ ಇಂದು-(ಅ.13)- ಸುನಾದ ಸಂಗೀತ ಕಲಾಶಾಲೆಯ ಸಂಗೀತೋತ್ಸವ - 2019
0
ಅಕ್ಟೋಬರ್ 12, 2019