HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ 164 ಬದಲಾವಣೆ ಬಯಸುವ ಯೋಜನೆಗಳಿಗೆ ಮಂಜೂರಾತಿ

 
     ಕಾಸರಗೋಡು:  ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳ 164 ಬದಲಾವಣೆ ಬಯಸುವ ಯೋಜನೆಗಳಿಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಮಂಜೂರಾತಿ ನೀಡಿದೆ. ನೂತನವಾಗಿ ಸಲ್ಲಿಸಲಾದ 106 ಯೋಜನೆಗಳಿಗೂ ಅಂಗೀಕಾರ ನೀಡಲಾಗಿದೆ.
    ಸಮಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್, ಕಾಸರಗೋಡು,ಕಾ?ಂಗಾಡ್ ನಗರಸಭೆಗಳು, ಪುತ್ತಿಗೆ, ಪಿಲಿಕೋಡ್,ಕೋಡೋ-ಬೇಳೂರು, ಮಡಿಕೈ ಗ್ರಾಮಪಂಚಾಯತ್ ಗಳ ಯೋಜನೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಗಿತ್ತು. 2019-20ನೇ ವರ್ಷದಲ್ಲಿ ಶೇ 26.54 ನಿಧಿ ಈ ವರೆಗೆ ವೆಚ್ಚಮಾಡಲಾಗಿದೆ ಎಂದು ತಿಳಿಸಲಾಯಿತು .ಸ್ಥಳೀಯಾಡಳಿತೆ ಸಂಸ್ಥೆಗಳ ಯೋಜನೆ ಪ್ರಗತಿ ಕುರಿತು ಚರ್ಚಿಸಲಾಯಿತು.
    ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರ್ಮಿಸಲಾಗುವ ಮಹಾತ್ಮಾ ಗಾಂಧೀಜಿ ಅವರಪ್ರತಿಮೆನಿರ್ಮಾಣಕ್ಕೆ ಸರಕಾರದ ಆದೇಶ ಪ್ರಕಾರ ಗ್ರಾಮಪಂಚಾಯತ್ ಗಳು ಸ್ವಂತ ನಿಧಿಯಿಂದ ಮೊಬಲಗು ಮೀಸಲಿರಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಗ್ರಹಿಸಿದರು.
   ಸಾಕ್ಷರತಾ ಮಿಷನ್ ಮತ್ತು ಕುಟುಂಬಶ್ರೀ ಜಂಟಿಯಾಗಿ ಜಾರಿಗೊಳಿಸುವ "ಸಮ" ಯೋಜನೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಮಹಿಳಾ ಪ್ರಬಲೀಕರಣಕ್ಕೆ ನೇತೃತ್ವ ನೀಡುತ್ತಿರುವ ಕುಟುಂಬಶ್ರೀಯ ಕಾರ್ಯಕರ್ತರಿಗೆ ಸಕಾರಾತ್ಮಕ ರೀತಿ ಹತ್ತನೇ ಮತ್ತು ಪ್ಲಸ್ ಟು ತತ್ಸಮಾನ ತರಗತಿ ಪರೀಕೆಗಳಲ್ಲಿ ಉತ್ತೀರ್ಣರಾಗಬಹುದಾದ ಯೋಜನೆ ಇದಾಗಿದೆ. ಹತ್ತನೇ ತರಗತಿ ತತ್ಸಮಾನ ತರಬೇತಿಯ ನೋಂದಣಿ 2020 ಜ.1ರಂದು ಆರಂಭಗೊಳ್ಳಲಿದೆ. ಪಂಚಾಯತ್-ನಗರಸಭೆ ವ್ಯಾಪ್ತಿಯಲ್ಲಿ 50 ಕುಟುಂಬಶ್ರೀ ಕಾರ್ಯಕರ್ತರಿಗೆ ತಲಾ ಒಂದು ತತ್ಸಮಾನಕಲಿಕಾ ಕೇಂದ್ರ ಆರಂಭಿಸುವ ರೀತಿ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಲಾಯಿತು.
     ಲೈಫ್ ಮಿಷನ್ ಯೋಜನೆಯ ಪ್ರಗತಿ ಅವಲೋಕನ ನಡೆಸಲಾಯಿತು.ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಯೋಜನೆ ಅಧಿಕಾರಿ ಕೆ.ಸತ್ಯಪ್ರಕಾಶ್, ಪಂಚಾಯತ್ ಸಹಾಯಕ ನಿರ್ದೇಶಕ ಟಿ.ಜೆ.ಅರುಣ್, ಯೋಜನೆ ಸಮಿತಿ ಸದಸ್ಯರು, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು, ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.
         ಗಮನೀಯ ಅಂಶ:
    ನೈಪುಣ್ಯ ಅಭಿವೃದ್ಧಿ ಕೇಂದ್ರ ಯೋಜನೆಗೆ ಮಂಜೂರಾತಿ:
      ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಸಿದ್ಧಪಡಿಸಲಾದ ಮಹಿಳಾ ನೈಪುಣ್ಯ ಅಭಿವೃದ್ಧಿ ಕೇಂದ್ರ ಯೋಜನೆಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಮಂಜೂರಾತಿ ನೀಡಿದೆ. ಯೋಜನೆಯ ಸಮಗ್ರ ವರದಿ ಸಲ್ಲಿಸಲು ಪರಪ್ಪ ಬ್ಲೋಕ್ ಉದ್ದಿಮೆ ಅಭಿವೃದ್ಧಿ ಅಧಿಕಾರಿಗೆ ಸಭೆ ಆದೇಶಿಸಿದೆ. ಕೃಷಿ ಉತ್ಪನ್ನಗಳಿಂದ ಮೂಲಕ ಮೌಲ್ಯಾಧರಿತ ಉತ್ಪನ್ನಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ತರಬೇತು ನೀಡುವ ನಿಟ್ಟಿನಲ್ಲಿ ನೈಪುಣ್ಯ ಕೇಂದ್ರ ಯೋಜನೆ ಆರಂಭಿಸಲಾಗಿದೆ. 
     ಎ.ಬಿ.ಸಿ. ಯೋಜನೆಗೆ ನಿಧಿ ಮೀಸಲಿರಿಸಬೇಕು:
    ಅನಿಮಲ್ ಬರ್ತ್ ಕಂಟ್ರೋಲ್ ಯೋಜನೆ(ಎ.ಬಿ.ಸಿ)ಗಾಗಿ ನಿಧಿ ಮೀಸಲಿರಿಸದೇ ಇರುವ ಸ್ಥಳೀಯಾಡಳಿತ ಸಂಸ್ಥೇಗಳು ತಕ್ಷಣ ನಿಧಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಆಗ್ರಹಿಸಿದರು. ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮಪಂಚಾಯತ್ ಗಳು ತಲಾ 2 ಲಕ್ಷ ರೂ., ಬ್ಲೋಕ್ ಪಂಚಾಯತ್ ಗಳು ತಲಾ 4 ಲಕ್ಷ ರೂ., ಜಿಲ್ಲಾ ಪಂಚಾಯತ್ 6 ಲಕ್ಷ ರೂ. ಮೀಸಲಿರಿಸಬೇಕಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಣಾಮಕಾರಿ ರೀತಿ ಈ ಯೋಜನೆ ಮುನ್ನಡಿಯಿಡುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆಲವು ನಿಧಿ ಮೀಸಲಿರಿಸದೇ ಇರುವ ಪರಿಣಾಮ ಯೊಜನೆಯ ಸಮಗ್ರತೆಗೆ ಮುಗ್ಗಟ್ಟು ತಲೆದೋರುತ್ತಿದೆ.ಯೋಜನೆಗೆ ನಿಧಿ ನೀಡದೇ ಇರುವ ಕೆಲವು ಗ್ರಾಮಪಂಚಾಯತ್ ಗಳ ಯೋಜನೆಗೆ ತಾತ್ಕಾಲಿಕವಾಗಿ ಮಂಜೂರಾತಿ ನೀಡಿಲ್ಲ. ನಿಇ ಒದಗಿಸಿದ ತಕ್ಷಣ ಈ ಪಂಚಾಯತ್ ಗಳ ಯೋಜನೆಗಳಿಗೆ ಅಂಗೀಕಾರ ನೀಡಲಾಗುವುದು ಎಂದವರು ನುಡಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries