ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಂಬಂಧ ಪೋಲಿಂಗ್ ಏಜೆಂಟರಿಗೆ ಅ.18ರಂದು ನೀಡಲಾಗುತ್ತಿರುವ ವಿಸ್ತೃತ ತರಬೇತಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
45 ನಿಮಿಷಗಳ ತರಬೇತಿ, 15 ನಿಮಿಷಗಳ ಅವಧಿಯಲ್ಲಿ ಸಂಶಯಗಳ ನಿವಾರಣೆ, ಇ.ವಿ.ಎಂ. ಕುರಿತು ಮಾಹಿತಿ ಸಹಿತ ಈ ತರಬೇತಿಯಲ್ಲಿ ಸೇರಿದೆ. ಎಂ.3 ಸರಣಿಯಲ್ಲಿರುವ ನೂತನ ಮತಯಂತ್ರಗಳು ಈ ಬಾರಿ ಚುನಾವಣೆಯಲ್ಲಿ ಬಳಕೆಯಾಗುತ್ತಿವೆ. ಬೂತ್ ಏಜೆಂಟರ ಹಕ್ಕುಗಳು, ಹೊಣೆ ಸಹಿತ ಪ್ರಧಾನ ಮಾಹಿತಿಗಳು ಈ ತರಬೇತಿಯಲ್ಲಿ ಸೇರಿವೆ. ಸ್ವತಂತ್ರ, ನ್ಯಾಯಯುತ, ಸುಧಾರಿತ ಮತದಾನಕ್ಕೆ ಎಲ್ಲ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿ ಈ ವೇಳೆ ವಿನಂತಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಮತಗಟ್ಟೆ ನಂಬ್ರ ಒಂದರಿಂದ 10 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, 11.30ರಿಂದ ಮತಗಟ್ಟೆ 11ರಿಂದ 20 ವರೆಗಿನ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 2 ಗಂಟೆಗೆ ಮತಗಟ್ಟೆ ನಂಬ್ರ21ರಿಂದ 29 ವರೆಗಿನ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗುವುದು.
ಮಂಗಲ್ಪಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಮತಗಟ್ಟೆ ನಂಬ್ರ 67ರಿಂದ 78 ವರೆಗಿನ ಪೋಲಿಂಗ್ ಏಜೆಂಟರಿಗೆ , ಬೆಳಗ್ಗೆ 11.30ರಿಂದ ಮತಗಟ್ಟೆ ನಂಬ್ರ 79ರಿಂದ 90 ವರೆಗಿನ ಬೂತ್ ನ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 2 ಗಂಟೆಗೆ ಮತಗಟ್ಟೆ ನಂಬ್ರ 126 ರಿಂದ 137 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗುವುದು.
ಕುಂಬಳೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10ಗಂಟೆಗೆ ಮತಗಟ್ಟೆ ಂಬ್ರ 126ರಿಂದ 137 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, 11.30ರಿಂದ ಮತಗಟ್ಟೆ ನಂಬ್ರ 138ರಿಂದ 149 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 2 ಗಂಟೆಗೆ ಮತಗಟ್ಟೆ ನಂಬ್ರ 150ರಿಂದ 160 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ಲಭಿಸಲಿದೆ.
ವರ್ಕಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಮತಗಟ್ಟೆ ನಂಬ್ರ 30ರಿಂದ 38 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 12 ಗಂಟೆಗೆ ಮತಗಟ್ಟೆ ನಂಬ್ರ 39ರಿಂದ 47 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ಲಭ್ಯವಾಗಲಿದೆ.
ಮೀಂಜ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಮತಗಟ್ಟೆ ನಂಬ್ರ 48ರಿಂದ 57 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 12 ಗಂಟೆಗೆ ಮತಗಟ್ಟೆ ನಂಬ್ರ 58ರಿಂದ 66 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗುವುದು.
ಪುತ್ತಿಗೆ ಗ್ರಾಮಪಂಚಾಯತ್ ಸಭಾಗಣದಲ್ಲಿ ಬೆಳಗ್ಗೆ 10 ಗಂಟೆಗೆ ಮತಗಟ್ಟೆ ನಂಬ್ರ 161 ರಿಂದ 169 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 12 ಗಂಟೆಗೆ ಮತಗಟ್ಟೆ ನಂಬ್ರ 170ರಿಂದ 177 ವರಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗುವುದು.
ಪೈವಳಿಕೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಂಟೆಗೆ ಮತಗಟ್ಟೆ ನಂಬ್ರ 102ರಿಂದ 113 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ, ಮಧ್ಯಾಹ್ನ 12 ಗಂಟೆಗೆ ಮತಗಟ್ಟೆ ನಂಬ್ರ 114ರಿಂದ 125 ವರೆಗಿನ ಬೂತ್ ಗಳ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗುವುದು.


