HEALTH TIPS

ಸೌಹಾರ್ದಯುತ ಚುನಾವಣೆ: ಧಾರ್ಮಿಕ ಮುಖಂಡರ ಸಭೆ ಬೆಂಬಲ

 
    ಕಾಸರಗೋಡು:   ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಅ.21ರಂದು ಶಾಂತಿಯುತ, ಸೌಹಾರ್ದಯುತ ಉಪಚುನಾವಣೆ ನಡೆಯುವಲ್ಲಿ ತಮ್ಮ ಪೂರ್ಣ ಬೆಂಬಲವಿದೆ ಎಂದು ಧಾರ್ಮಿಕ ಮುಖಂಡರ ಸಭೆ ಭರವಸೆ ನೀಡಿದೆ.
     ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
          ಮಂಜೇಶ್ವರದಲ್ಲಿ ಅನೇಕ ತಲೆಮಾರುಗಳಿಂದ ಸಾಗಿಬಂದ ಸೌಹಾರ್ದಯುತ ವಾತಾವರಣ ಚುನಾವಣೆಯ ವೇಳೆಯೂ ಮುಂದುವರಿಯಬೇಕು ಎಂದು ಸಭೆ ಆಗ್ರಹಿಸಿದೆ. ಧಾರ್ಮಿಕ ಕೇಂದ್ರಗಳನ್ನು ಯಾವುದೇ ಪಕ್ಷದ ಪರವಾಗಿ ಮತಯಾಚನೆಗಿರುವ ಸಂಸ್ಥೆಯಾಗಿ ಬಳಸಬಾರದು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು. ಇದು ನಡೆಯದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಧಾರ್ಮಿಕ ಮುಖಂಡರು ಭರವಸೆ ನೀಡಿದರು.
         ಸಭೆಯಲ್ಲಿ ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ, ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್, ಮಂಜೇಶ್ವರ ವಿಧಾನಸಭೆ ಕ್ಷೇತ್ರ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಹೆಚ್ಚುವರಿ ದಂಡನಾಧಿಕಾರಿ ಕೆ.ಸುನಿಲ್ ಕುಮಾರ್, ಆರ್.ಡಿ.ಒ.ಕೆ.ರವಿ ಕುಮಾರ್, ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್, ಧಾರ್ಮಿಕ ಮುಂದಾಳುಗಳಾದ ಸೂಫಿ ಹಾಜಿ, ಎ.ಕೆ.ಮೊಹಿಯುದ್ದೀನ್, ಅಬೂಬಕ್ಕರ್ ಮಾಹಿನ್, ಮೊಯ್ದೀನ್ ಆರಿಫ್ ಮೊದಲಾದವರು ಉಪಸ್ಥಿತರಿದ್ದರು.
          ಸಂಶಯಕರ ಎಲ್ಲಹಣದ ವ್ಯವಹಾರಗಳ ಬಗ್ಗೆ ನಿಗಾ ಇರಿಸಲಾಗುವುದು: ನಿರೀಕ್ಷಕ
       ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ನೀತಿ ಸಂಃಇತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್ ಗಳು ಚುನಾವಣೆ ಆಯೋಗ ತಿಳಿಸಿರುವ ಆದೇಶಗಳನ್ನುಕಡ್ಡಾಯವಾಗಿ ಪಾಲಿಸಬೇಕು ಎಂದು ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್ ಅವರು ತಿಳಿಸಿದರು. 
      ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ಉಪಚುನಾವಣೆ ಸಂಬಂಧ ನಡೆದ ಬ್ಯಾಂಕ್ ಸಿಬ್ಬಂದಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ವ್ಯಕ್ತಿಗಳು ಯಾ ಸಂಸ್ಥೆಗಳು ನಡೆಸುವ ಸಂಶಯಕರ ಹಣದವ್ಯವಹಾರಗಳಿದ್ದಲ್ಲಿ ತಕ್ಷಣ ಜಿಲ್ಲಾ ಚುನಾವಣೆ ಅಧಿಕಾರಿ, ಖರ್ಚುವೆಚ್ಚ ಮೋನಿಟರಿಂಗ್ ಸೆಲ್ ಗೆ ಮಾಹಿತಿ ನೀಡಬೇಕು. ಉಪಚುನಾವಣೆಯ ಕಾಲಾವಧಿಯಲ್ಲಿ ಸಂಶಯಕರ ರೀತಿ ಒಂದು ಲಕ್ಷ ರೂ.ಗಿಂತ ಅಧಿಕ ನಗದನ್ನು ಹಿಂಪಡೆಯುವ (ವಿದ್ ಡ್ರಾ ಮಾಡುವುದು), ಠೇವಣಿ ಯಿರಿಸುವುದು, ಒಂದು ಬ್ಯಾಂಕ್ ಖಾತೆಯಿಂದ ಹಲವರ ಖಾತೆಗಳಿಗೆ ಆರ್.ಟಿ.ಜಿ.ಎಸ್., ಎನ್.ಇ.ಎಫ್.ಟಿ., ಮೂಲಕ ಹಣ ವರ್ಗಾವಣೆ ನಡೆಸುವುದು, ಅಬ್ಯರ್ಥಿ, ಅವರ ಪತ್ನಿ/ಪತಿ ಯ ಖಾತೆಯಿಂದ ನಿಗದಿತ ಖಾತೆಗಳಿಗೆ ಒಂದು ಲಕ್ಷ ರೂ. ಯಾ ಅದಕ್ಕಿಂತ ಅಧಿಕ ಮೊಬಲಗು ವರ್ಗಾಯಿಸುವುದು, ಯಾ ಹಿಂಪಡೆಯುವುದು ನಡೆದಲ್ಲಿ ತಕ್ಷಣ ವರದಿ ಮಾಡುವಂತೆ ಆದೇಶ ನೀಡಲಾಗಿದೆ. ಎಲ್ಲ ಬ್ಯಾಂಕ್ ಪ್ರಬಂಧಕರು ಜಿಲ್ಲಾಧಿಕಾರಿ ಅವರಿಗೆ ಚುನಾವಣೆಯ ಅವಧಿಯಲ್ಲಿ ನೀಡುವ ದೈನಂದಿನ ವರದಿಯ ವಿಚಾರದಲ್ಲಿ ಉದಾಸೀನತೆ ತೋರಬಾರದು ಎಂದವರು ತಿಳಿಸಿದರು.
    10 ಲಕ್ಷ ರೂ.ಗಿಂತ ಅಧಿಕ ಹಣದ ವ್ಯವಹಾರ ನಡೆದಲ್ಲಿ ತಕ್ಷಣ ಬ್ಯಾಂಕ್ ಪ್ರಬಂಧಕ ಆದಾಯ ತೆರಿಗೆ ನೋಡೆಲ್ ಅಧಿಕಾರಿಗೂ ಮಾಹಿತಿ ನೀಡಬೇಕು. ಬ್ಯಾಂಕ್ ಗಳಿಂದ ಎ.ಟಿ.ಎಂ.ಗೆ ನಗದು ಸಹಿತ ರವಾನೆಯಾಗುವ ವಾಹನಕ್ಕೆ ಬ್ಯಂಕ್ ನ ಅಧಿಕೃತ ವಾಹನದ ಬೆಂಗಾವಲು ಒದಗಿಸಬೇಕು. ಎ.ಟಿ.ಎಂ.ಗೆ ರವಾನಿಸಲಾಗುವ ನಗದಿನ ಸ್ಪಷ್ಟ ಗಣನೆ ಇರಿಸಿಕೊಳ್ಳಬೇಕು ಎಂದು ನಿರೀಕ್ಷಕ ತಿಳಿಸಿದರು.
   ಸಭೆಯಲ್ಲಿ ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ವಿವಿಧ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
          ಅಭ್ಯರ್ಥಿಗಳಿಂದ ಎರಡನೇ ಹಂತದ ಖರ್ಚುವೆಚ್ಚ ಗಣನೆ ಸಲ್ಲಿಕೆ:
     ಮಂಜೇಶ್ವರ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 7 ಮಂದಿ ಅಭ್ಯರ್ಥಿಗಳು ಸೋಮವಾರ ತಮ್ಮ ಪ್ರಚಾರದ ಎರಡನೇ ಹಂತದ ಖರ್ಚುವೆಚ್ಚದ ಗಣನೆ ಸಲ್ಲಿಸಿದ್ದಾರೆ.
     ಅ.8ರಿಂದ 12 ವರೆಗಿನ ವೆಚ್ಚಗಳ ಗಣನೆಗಳನ್ನು ಈ ಮೂಲಕ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಕ್ಸ್ ಪೆಂಡೀಚರ್ ಮೋನಿಟರಿಂಗ್ ಸೆಲ್ ಗೆ ಗಣನೆಗಳನ್ನು ಹಸ್ತಂತರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಎಕ್ಸ್ ಪೆಂಡೀಚರ್ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್ ಅವರ ನೇತೃತ್ವದಲ್ಲಿ ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಸಹಾಯಕ ಎಕ್ಸ್ ಪೆಂಡೀಚರ್ ನಿರೀಕ್ಷಕ ಟಿ.ಇ.ಜನಾರ್ದನನ್ ಮೊದಲಾದವರ ತಂಡ ಗಣನೆಗಳ ಪರಿಶೀಲನೆ ನಡೆಸಿದೆ.
     ಕಳೆದ ಬಾರಿ ನಡೆದ ಮೊದಲ ಹಂತದ ಗಣನೆ ಸಲ್ಲಿಕೆ ವೇಳೆ ಹಾಜರಾಗದೇ ಇದ್ದ ಕಾರಣ ನೋಟೀಸು ಕಳುಹಿಸಲಾಗಿದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸೋಮವಾರ ಜರುಗಿದ ಸಭೆಗೆ ಹಾಜರಾಗಿ ಗಣನೆಗಳನ್ನು ಹಾಜರುಪಡಿಸಿ, ಹಿಂದಿನ ಸಭೆಗೆ ಗೈರು ಹಾಜರಾದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
       ಕಳೆದ ಬಾರಿಯ ಸಭೆಯಲ್ಲಿ ಗಣನೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟೀಸು ಕಳುಹಿಸಲಾಗಿದ್ದ ಮೂವರು ಅಭ್ಯರ್ಥಿಗಳು ಸೋಮವಾರ ನಡೆದ ಸಭೆಗೆ ಹಾಜರಾಗಿದ್ದು, ಸ್ಪಷ್ಟೀಕರಣ ನೀಡಿದ್ದಾರೆ. ಚುನಾವಣೆ ಅಧಿಕಾರಿ ವಿತರಿಸಿದ್ದ ಚುನಾವಣೆ ಖರ್ಚುವೆಚ್ಚ ರೆಜಿಸ್ಟರ್ ನಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಗಣನೆಗಳನ್ನು, ಎಕ್ಸ್ ಪೆಂಡೀಚರ್ ಮೋನಿಟರಿಂಗ್ ಸೆಲ್ ನ ನಿಗಾದಲ್ಲಿ ಇರಿಸಲಾದ ಷಾಡೋ ಒಬ್ಸರ್ ವೇಷನ್ ರೆಜಿಸ್ಟರ್ ನೊಂದಿಗೆ ಹೋಲಿಸಿ ನೋಡಲಾಗುತ್ತದೆ. ನೂತನ ಗಣನೆಗಳನ್ನು ಅ.18ರಂದು ಸಲ್ಲಿಸಬೇಕಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries