HEALTH TIPS

ಅ.22ರಂದು ಬ್ಯಾಂಕು ಒಕ್ಕೂಟಗಳ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

   
      ನವದೆಹಲಿ; ಬ್ಯಾಂಕು ವಿಲೀನ, ಠೇವಣಿ ದರ ಇಳಿಕೆ ವಿರೋಧಿಸಿ ಮತ್ತು ಉದ್ಯೋಗ ಭದ್ರತೆಗೆ ಕರೆ ನೀಡಿ ಎರಡು ಬ್ಯಾಂಕು ಒಕ್ಕೂಟಗಳು ಇದೇ 22ರಂದು ಮುಷ್ಕರ ನಡೆಸಲು ಸಜ್ಜಾಗಿರುವುದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಅಂದು ವ್ಯತ್ಯಯವಾಗುವ ಸಾಧ್ಯತೆಯಿದೆ.
     ಅಖಿಲ ಭಾರತ ಬ್ಯಾಂಕು ಉದ್ಯೋಗಿಗಳ ಸಂಘ ಮತ್ತು ಭಾರತೀಯ ಬ್ಯಾಂಕು ಉದ್ಯೋಗಿಗಳ ಫೆಡರೇಶನ್ (ಬಿಇಎಫ್ ), ಭಾರತೀಯ ಬ್ಯಾಂಕು ಅಸೋಸಿಯೇಷನ್ ಗೆ ಮಾಹಿತಿ ನೀಡಿ ಅಕ್ಟೋಬರ್ 22ರಂದು ಬೆಳಿಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ನಡೆಸುವುದಾಗಿ ಹೇಳಿದೆ.
    ಮುಷ್ಕರದಲ್ಲಿ ನಿರತವಾಗುವ ಸಂಘಟನೆಗಳಿಗೆ ತಮ್ಮ ಬ್ಯಾಂಕಿನ ಬಹುತೇಕ ನೌಕರರು ಸದಸ್ಯರಾಗಿಲ್ಲದಿರುವುದರಿಂದ ಇದರ ಪರಿಣಾಮ ಕಡಿಮೆಯಿರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries