HEALTH TIPS

ರೋಡ್ ಶೋ-ಆಕರ್ಷಣೀಯತೆಯೊಂದಿಗೆ ಬಹಿರಂಗ ಪ್ರಚಾರ ಅಂತ್ಯ-ಸಂಚಾರ ಅಸ್ತವ್ಯಸ್ತ:


    ಕುಂಬಳೆ/ಮಂಜೇಶ್ವರ: ಸೋಮವಾರ ನಡೆಯಲಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗರಿಗೆದರಿ ಉತ್ಸಾಹದಿಂದ ವಿವಿಧ ರಾಜಕೀಯ ಪಕ್ಷಗಳು ಮುನ್ನಡೆಸಿದ ಬಹಿರಂಗ ಚುನಾವಣಾ ಪ್ರಚಾರ ಶನಿವಾರ ಸಂಜೆ ಆಕರ್ಷಣೀಯ ರೋಡ್ ಶೋ, ಗದ್ದಲಗಳೊಂದಿಗೆ ಸಮಾಪ್ತಿಗೊಂಡಿತು.
     ಕಣದಲ್ಲಿರುವ ಮೂರು ಪ್ರಧಾನ ಪಕ್ಷಗಳಾದ ಎನ್ ಡಿ ಎ, ಯುಡಿಎಫ್ ಹಾಗೂ ಎಲ್ ಡಿ ಎಫ್ ಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಕಾರ್ಯಕರ್ತರ ಮುಗಿಲು ಮುಟ್ಟುವ ಪ್ರಚಾರ ಘೋಷಣೆ ಕುಂಬಳೆ, ಉಪ್ಪಳ, ಮಂಜೇಶ್ವರ, ಪೆರ್ಲಗಳಲ್ಲಿ ವಿಶಿಷ್ಟವಾಗಿ ಮೂಡಿಬಂತು. ಎನ್ ಡಿ ಎ  ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರು ಕುಂಬಳೆ ರೈಲು ನಿಲ್ದಾನ ಪರಿಸರದಿಂದ ಪೇಟೆಯ ವರೆಗೆ ರೋಡ್ ಶೋ ನಡೆಸಿದರು. ಬಳಿಕ ಮಜೀರ್ಪಳ್ಳದಿಂದ ಬೈಕ್ ರ್ಯಾಲಿ ಮೊರತ್ತಣೆ, ಮೀಯಪದವು, ಹೊಸಂಗಡಿ, ಉಪ್ಪಳ, ಬಂದ್ಯೋಡು, ಪೆರ್ಮುದೆ, ಪುತ್ತಿಗೆ, ಸೀತಾಂಗೋಳಿ, ನಾಯ್ಕಾಪು ಮೂಲಕ ಕುಂಬಳೆಗೆ ಆಗಮಿಸಿ ಸಂಜೆ ಸಮಾರೋಪಗೊಂಡಿತು.
   ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಅವರ ಚುನಾವಣಾ ಬಹಿರಂಗ ಪ್ರಚಾರದ ಭಾಗವಾಗಿ ಶನಿವಾರ ಬಂದ್ಯೋಡು, ಕೈಕಂಬಗಳಿಂದ ಬೈಕ್ ರೋಡ್ ಶೋ ನಡೆದು ಉಪ್ಪಳದಲ್ಲಿ ಸಮಾರೋಪಗೊಂಡಿತು.

   ಎಲ್ ಡಿ ಎಫ್ ಅಭ್ಯರ್ಥಿ ಎಂ.ಶಂಕರ ರೈ ಅವರ ಪ್ರಚಾರದ ಭಾಗವಾಗಿ ಶನಿವಾರ ಕುಂಬಳೆಯಲ್ಲಿ ಗೃಹ ಸಂದರ್ಶನ ನಡೆಯಿತು. ಬಳಿಕ ಕುಂಬಳೆ, ಹೊಸಂಗಡಿ, ಪೆರ್ಲಗಳಲ್ಲಿ ಸಾರ್ವಜನಿಕ ಸಭೆ ನಡೆದು ರೋಡ್ ಶೋ ನಡೆಯಿತು.
       ತಾವರೆ ಹೂ ನೀಡಿ ಗಮನ ಸೆಳೆದ ಮತಯಾಚನೆ:
   ಒಂದು ತಾವರೆ ಹೂ ಕೊಡುವೆವು. ಬದಲಿಗೆ ತಾವರೆಗೊಂದು ಮತ ನೀಡಿ ಎಂಬ ವಿಶಿಷ್ಟ ಪ್ರಚಾರ ತಂತ್ರದೊಂದಿಗೆ ಕೇರಳ ಕಾಂಗ್ರೆಸ್ಸ್ ಮುಖಂಡ ಪಿ.ಸಿ.ಥೋಮಸ್ ಯುವಜನ ವಿಭಾಗದ ಯೂತ್ ಫ್ರಂಟ್ ನೇತೃತ್ವದಲ್ಲಿ ಕುಂಬಳೆಯಲ್ಲಿ ಶನಿವಾರ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಪರ ನಡೆದ ಚುನಾವಣಾ ಪ್ರಚಾರ ಗಮನ ಸೆಳೆಯಿತು.
   ಕುಂಬಳೆಯ ಎಲ್ಲಾ ಸಾರ್ವಜನಿಕರಿಗೂ ಈ ಸಂದರ್ಭ ತಾವರೆ ಹೂ ವಿತರಿಸಲಾಯಿತು. ಯೂತ್ ಪ್ರಂಟ್ ರಾಜ್ಯಾಧ್ಯಕ್ಷ ಸಜೀವನ್ ಗೋಪಾಲಕೃಷ್ನನ್ ನೇತೃತ್ವದಲ್ಲಿ ನಡೆದ ತಾವರೆ ಹೂ ವಿತರಣೆಯನ್ನು ಕೇರಳ ಕಾಂಗ್ರೆಸ್ಸ್ ಪಕ್ಷದ ಅಧ್ಯಕ್ಷ ಪಿ.ಸಿ.ಥೋಮಸ್ ಅವರು ರವೀಶ ತಂತ್ರಿಯವರಿಗೆ ತಾವರೆ ಹೂ ನೀಡಿ ಉದ್ಘಾಟಿಸಿದರು. ಬಳಿಕ ತಾವರೆ ಹೂವಿಂದ ನಿರ್ಮಿತ ಕಿರೀಟ ತೊಡಿಸಲಾಯಿತು.
      ಸಂಚಾರ ಅಸ್ತವ್ಯಸ್ತ:
   ಕುಂಬಳೆ : ಮಂಜೇಶ್ವರ ಉಪಚುನಾವಣೆ ಹಿನ್ನಲೆಯಲ್ಲಿ ಶನಿವಾರ ಮುಕ್ತಾಯಗೊಂಡ ವಿವಿಧ ರಾಜಕೀಯ ಪಕ್ಷಗಳ ಬಹಿರ0ಗ ಪ್ರಚಾರದ ನಡವಳಿಕೆಗಳು ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಸೃಸ್ಟಿಸಿತು.
     ರಾ.ಹೆದ್ದಾರಿ ಕು0ಬಳೆ, ಬಂದ್ಯೋಡು, ಉಪ್ಪಳ, ಹೊಸಂಗಡಿ, ಮಂಜೇಶ್ವರ, ತಲಪಾಡಿಗಳಲ್ಲಿ 4 ಗಂಟೆಗಳ ರಸ್ತೆ ತಡೆಗೆ ಕಾರಣವಾಯಿತು. ಬಸ್ ಗಳು ನಿಲ್ದಾಣದೊಳಗೆ ಬರಲಾಗದೆ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಬೇಕಾಯಿತು. ರೋಡ್ ಶೋ , ಮೆರವಣಿಗೆ, ವಾದ್ಯ ಘೋಷ, ಮೈಕ್ ಗಳ ಆರ್ಭಟ ಗೊ0ದಲಗಳಿಗೆ ಕಾರಣವಾಯಿತು. ಹೆದ್ದಾರಿ ಪೂರ್ತಿ ಬ್ಲಾಕ್ ಆಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.
    ಚುನಾವಣಾ ಪ್ರಚಾರದ ಕೊನೆಯ ದಿನದ ಗೌಜು ಗಳನ್ನು ನಿಯಂತ್ರಿಸಬೇಕೆ0ಬ ಸಾವ9ಜನಿಕರ ದಶಕಗಳ ಬೇಡಿಕೆ ಈ ವರೆಗೂ ಈಡೇರಿಲ್ಲ. ಪೋಲೀಸರು , ರಕ್ಷಣಾ ತ0ಡಗಳ ಉಪಸ್ಥಿತಿಯಲ್ಲೇ ಇದೆಲ್ಲ ನಡೆಯುವುದು ವಿಶೇಷವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries