ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಸಾರ್ವಜನಿಕ ಬಲಿಯೇಂದ್ರ ಪರ್ಬ ಆಚರಣೆಯು ಸಾಂಸ್ಕøತಿಕ, ಸಾಮಾಜಿಕ ಸಂಘಟನೆಯಾದ ರಂಗಸಿರಿ ವೇದಿಕೆಯ ಆಶ್ರಯದಲ್ಲಿ ಅ.27 ಭಾನುವಾರ ಅಪರಾಹ್ನ 3 ರಿಂದ ರಾತ್ರಿ 7ಗಂಟೆಯ ತನಕ ವೈವಿಧ್ಯಪೂರ್ಣವಾಗಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ಸಂಗೀತ ಕುರ್ಚಿ, ಮಹಿಳೆಯರಿಗಾಗಿ ಹೂವು ಕಟ್ಟುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗಾಗಿ ರಸಪ್ರಶ್ನೆ ಸ್ಪರ್ಧೆಯು ನಡೆಯಲಿದೆ. ಸಂಗೀತ ಕುರ್ಚಿ ಸ್ಪರ್ಧೆಯು 5ನೇ ತರಗತಿ ಮೇಲ್ಪಟ್ಟು 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ನಡೆಯಲಿದೆ. ಹೂಕಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ವಯೋಮಾನದ ಮಿತಿಯಿಲ್ಲ. ಹೂ, ದಾರಗಳನ್ನು ಸ್ಪರ್ಧಾಳುಗಳೇ ತರಬೇಕು. ಗ್ರಾಮೀಣ ಸೊಗಸಿನ ಹೂಗಳನ್ನು ಬಳಸಿಕೊಂಡ ರೀತಿ, ಕಟ್ಟಿದ ಕ್ರಮ ಇವುಗಳನ್ನು ಗಮನಿಸಿ ಮೌಲ್ಯ ನಿರ್ಣಯ ಮಾಡಲಾಗುವುದು. ರಸಪ್ರಶ್ನೆ ಸ್ಪರ್ಧೆಗೆ ಮುಕ್ತ ಅವಕಾಶವಿದೆ. ನಮ್ಮ ಈ ಮಣ್ಣಿನ ಭಾಷೆ, ಇತಿಹಾಸ, ಸಂಸ್ಕøತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲಾ ಸ್ಪರ್ಧಾಳುಗಳು ಆ ದಿನ ಸಂಜೆ 3 ಗಂಟೆಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿ ಭಾಗವಹಿಸಬಹುದೆಂದು ಪ್ರಕಟಣೆಯು ತಿಳಿಸಿದೆ.
ಸ್ಪರ್ಧೆಗಳ ಬಳಿಕ ಬಲೀಂದ್ರ ತಯಾರಿ, ಸಭೆ, ಭಾಷಣ, ಬಹುಮಾನ ವಿತರಣೆ, ಸಾಕ್ಷ್ಯ ಚಿತ್ರ ಪ್ರದರ್ಶನ, ಬಲೀಂದ್ರ ಲೆಪ್ಪುನಿ, ಸಿಹಿ ಅವಲಕ್ಕಿ ಪಾನಕ ವಿತರಣೆ ನಡೆಯಲಿದೆ. ಬಳಿಕ ಹಾನಿಯಿಲ್ಲದ ಸುಡುಮದ್ದಗಳನ್ನು ಸಾಮೂಹಿಕವಾಗಿ ಉರಿಸುವ ಸುಂದರ ಕಾರ್ಯಕಮ ನಡೆಯಲಿದೆ. ವೈವಿಧ್ಯಪೂರ್ಣವಾಗಿ, ಸುಂದರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ರಂಗಸಿರಿ ಪ್ರಕಟಣೆಯು ತಿಳಿಸಿದೆ.

