HEALTH TIPS

ಶೇಣಿಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಸಿದ್ಧತೆ ಆರಂಭ

       ಪೆರ್ಲ: ಮಕ್ಕಳ ಕಲಾ ಕೌಶಲ್ಯವನ್ನು ಪ್ರದರ್ಶಿಸುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಅ.28 ರಿಂದ 31ರ ತನಕ ಶೇಣಿ ಶ್ರೀಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿದ್ದು ಇದರ ಪೂರ್ವ ಸಿದ್ಧತೆ ಈಗಾಗಲೇ ಆರಂಭಗೊಂಡಿದ್ದು ಭರದಿಂದ ಸಾಗುತ್ತಿದೆ.
       ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ಹಾಗೂ ಹೈಯರ್ ಸೆಕೆಂಡರಿ ವಿಭಾಗದ  ಮಕ್ಕಳು ಭಾಗವಹಿಸುವ ಈ ಕಲೋತ್ಸವದ ಸ್ಪರ್ಧಾ ನೊಂದವಣೆ ಮಾಹಿತಿ ತಂತ್ರಜ್ಞಾನದ ಮೂಲಕ ಚಾಲನೆಗೊಂಡಿದೆ. ಕಲೋತ್ಸವದ ಚಪ್ಪರ, ವೇದಿಕೆ, ಊಟೋಪಚಾರದ ಸಿದ್ದತೆಗಳು ಆರಂಭಗೊಂಡಿದ್ದು   ಕಲೋತ್ಸವದ ಯಶಸ್ವಿಗಾಗಿ ರಚಿಸಿದ ಸ್ವಾಗತ ಸಮಿತಿ, ಆರ್ಥಿಕ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ದುಡಿಯುತ್ತಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಕಲೋತ್ಸವದಲ್ಲಿ ವಿವಿಧ ಶಾಲೆಗಳಿಂದ ಬರುವ ವಿದ್ಯಾರ್ಥಿಗಳು ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮುಂತಾದ 329 ವಿಭಾಗದ ವಿವಿಧ ಸ್ಪರ್ಧೆಯಲ್ಲಿ ಸುಮಾರು 4 ಸಾವಿರ ಸ್ಪರ್ಧಾಳುಗಳು ಪಾಲ್ಗೊಳಲಿದ್ದಾರೆ ಎಂದು ಕಾರ್ಯಕ್ರಮ ನಿರ್ವಹಣ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 14 ವೇದಿಕೆಗಳಲ್ಲಿ ಕಾರ್ಯಕ್ರಮ ಜರಗಲಿದ್ದು 7 ಒಳಾಂಗಣ ವೇದಿಕೆ ಹಾಗೂ 7 ಹೊರಾಂಗಣ ವೇದಿಕೆ ರಚಿಸಲಾಗುತ್ತದೆ. ಕಲೋತ್ಸವದ ಒಟ್ಟು ಖರ್ಚು ರೂ.15 ಲಕ್ಷ ಅಂದಾಜು ವೆಚ್ಚವಾಗಿದ್ದು ಈ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಾತ್ರವಲ್ಲದೆ ವೀಕ್ಷಿಸಲು ಆಗಮಿಸುವ ಕಲಾಭಿಮಾನಿಗಳಿಗೂ ಕಲೋತ್ಸವದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿರುವರು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇದರ ಸಿದ್ಧತೆ ಉತ್ಸವದ ಪ್ರತೀತಿ ಸೃಷ್ಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries