ಕಾಸರಗೋಡು: ಹಾಲಿನ ಗುಣಮಟ್ಟದ ಕುರಿತು ಜನಜಾಗೃತಿ ಕಾರ್ಯಕ್ರಮ ನಾಳೆ(ಅ.18) ಬೆಳಗ್ಗೆ 10 ಗಂಟೆಗೆ ಪೆರಿಯ ಹಾಲು ಉತ್ಪಾದನೆ ಸಹಕಾರಿ ಸಂಘ ಆವರಣದಲ್ಲಿ ನಡೆಯಲಿದೆ.
ಹಾಲು ಅಭಿವೃದ್ಧಿಇಲಾಖೆ , ಕಾಸರಗೋಡು ಜಿಲ್ಲಾ ಗುಣಮಟ್ಟ ನಿಯಂತ್ರಣ ಯೂನಿಟ್ ವತಿಯಿಂದ ಕಾರ್ಯಕ್ರಮ ಜರುಗುವುದು. ಹಾಲು ಅಭಿವೃದ್ಧಿ ಇಲಾಖೆಯ ಸಹಾಯಕನಿರ್ದೇಶಕ ಷಾಂಟಿ ಅಬ್ರಾಹಂ ಉದ್ಘಾಟಿಸುವರು. ಪೆರಿಯ ಕ್ಷೀರಸಂಘ ಅಧ್ಯಕ್ಷ ಎಂ.ಮೋಹನನ್ ಅಧ್ಯಕ್ಷತೆ ವಹಿಸುವರು. ಪರಿಣತರಾದ ಎಸ್.ಮಹೇಶ್, ವಿ.ಮನೋಹರ್ ವಿವಿಧ ವಿಷಯಗಳಲ್ಲಿ ತರಗತಿ ನಡೆಸುವರು.

