ಕಾಸರಗೋಡು: ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಮೆಚ್ವರ್ ನಾಟಕ ಸ್ಪರ್ಧೆ ಶೀಘ್ರದಲ್ಲಿ ನಡೆಯಲಿದೆ. ರಾಜ್ಯ ಯುವಜನ ಕಲ್ಯಾಣ ಮಂಡಳಿ ವತಿಯಿಂದ ಯೂತ್ ಥಿಯೇಟರ್ ಫೆಸ್ಟಿವಲ್ ಆಫ್ ಕೇರಳ ಶಾರ್ಟ್ ಪ್ಲೇ ಕಾಂಪಿಟೀಷನ್ ಎಂಬ ಹೆಸರಲ್ಲಿ ಈ ಸ್ಪರ್ಧೆ ನಡೆಸಲಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ವಿಜೇತರಿಗೆ ಮೊದಲ ಬಹುಮಾನ ರೂಪದಲ್ಲಿ 25 ಸಾವಿರ ರೂ. ಮತ್ತು ಪ್ರಸ್ತುತಿ ನಿಧಿ ಲಭಿಸಲಿದೆ. ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ 5 ಸಾವಿರ ರೂ. ಸಿಗಲಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ವಿಜೇತರಿಗೆ ಮೊದಲ ಬಹುಮಾನ ರೂಪದಲ್ಲಿ ಒಂದು ಲಕ್ಷ ರೂ. ಲಭಿಸಲಿದೆ. ದ್ವಿತೀಯ ಬಹುಮಾನ 75 ಸಾವಿರ ರೂ., ತೃತೀಯ 50 ಸಾವಿರ ರೂ. ಸಿಗಲಿದೆ. ಆಸಕ್ತರು ಅ.30ರ ಮುಂಚಿತವಾಗಿ ಅರ್ಜಿಯನ್ನು ಜಿಲ್ಲಾ ಯುವಜನ ಕಲ್ಯಾಣ ಕೇಂದ್ರಕ್ಕೆ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256219.