ಕುಂಬಳೆ: ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಾಮಾಜಿಕ ಹಿತ ಚಿಂತನೆಯ ಸದುದ್ದೇಶದೊಂದಿಗೆ ಸ್ಥಾಪಿಸಲಾದ ಶ್ರೀ ಶಾರದಾ ಸೇವಾ ಟ್ರಸ್ಟ್‍ನ ಉದ್ಘಾಟನೆ ವಿಜಯದಶಮಿಯ ಸುಸಂದರ್ಭದಲ್ಲಿ ಕುಂಬಳೆ ಸದ್ಗುರು ಶ್ರೀನಿತ್ಯಾನಂದ ಸ್ವಾಮಿ ಮಠದಲ್ಲಿ ನಡೆಯಿತು.
ಟ್ರಸ್ಟ್ ನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ದೀಪ ಬೆಳಗಿಸಿ ಉದ್ಘಾಟಿಸಿದರು. ಲೋಕ ಹಿತದ ಕಾಮನೆಯ ಸತ್ ಸಂಕಲ್ಪದೊಂದಿಗೆ ಕಾರ್ಯವೆಸಗುವ ಸಂಸ್ಥೆಯ ಅಗತ್ಯ ತುರ್ತು ಇದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಈ ಸಂಸ್ಥೆ ಕಣಿಪುರೇಶನ ಅನುಗ್ರಹದೊಂದಿಗೆ ಯಶಸ್ವಿಯಾಗಿ ಬೆಳೆಯಲಿ. ಸಮಾಜದ ಎಲ್ಲಾ ಸಜ್ಜನರು ಕೈಜೋಡಿಸಿ ಮುಂದುವರಿಯಲಿ ಎಂದು ಅವರು ಈ ಸಂದರ್ಭ ಹಾರೈಸಿದರು.
ಶ್ರೀಶಾರದಾ ಸೇವಾ ಟ್ರಸ್ಟ್ ನ ನಾಮಫಲಕವನ್ನು ಇಚ್ಲಂಪಾಡಿ ಮನೆತನದ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಕುಂಬಳೆ ಪರಿಸರದಲ್ಲಿ ಧಾರ್ಮಿಕ ಚಟುವಟಿಕೆಗಳು ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿತ್ತು. ಕೆಲವು ವರ್ಷಗಳಿಂದ ಕುಂಠಿತಗೊಂಡಿರುವ ಹಬ್ಬಾಚರಣೆಗಳ ಸಂಭ್ರಮ ಇದೀಗ ಮತ್ತೆ ಟ್ರಸ್ಟ್ ನ ಚಾಲನೆಯ ಮೂಲಕ ಹೆಚ್ಚು ಪ್ರಚುರಗೊಳ್ಳುವ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸದ್ಗುರು ಶ್ರೀನಿತ್ಯಾನಂದ ಸ್ವಾಮಿ ಮಠದ ಆಡಳಿತ ಸಮಿತಿ ಅಧ್ಯಕ್ಷ ಕೆ.ವಿ.ಶಿವರಾಮನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಸುಜನಾ ಶಾಂತಿಪಳ್ಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಪುಣಿಯೂರು ವಂದಿಸಿದರು.





