ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸಿದ ಹಿನ್ನಲೆಯಲ್ಲಿ ಖಾಸಗಿ ಲಕ್ಷ್ಮೀ ನಿಲಾಸ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳಿಗೆ ದುಬಾರಿ ದಂಡ ವಿಧಿಸಲಾಗಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಲಕ್ಷ್ಮಿ ವಿಲಾಸ ಬ್ಯಾಂಕ್ ಗೆ 1 ಕೋಟಿ ರೂಪಾಯಿ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ 75 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಮೂಲಗಳ ಪ್ರಕಾರ ಇನ್ ಕಮ್ ರೆಕಗ್ನಿಷನ್ ಆಂಡ್ ಅಸೆಟ್ ಕ್ಲಾಸಿಫಿಕೇಷನ್(ಐಆರ್ ಎಸಿ) ನಿಯಮಾವಳಿ ಪ್ರಕಾರ ದಾಖಲೆಗಳನ್ನು ಸಲ್ಲಿಸದ ಲಕ್ಷ್ಮಿ ವಿಲಾಸ ಬ್ಯಾಂಕ್?ಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಜೊತೆಗೆ ಬ್ಯಾಂಕಿಂಗ್ ರೆಗುಲೇಷನ್ ಆಕ್ಟ್ 1949ರ ಸೆಕ್ಷನ್ 46(4)(i) ಮತ್ತು 51(1) ಮತ್ತು ಸೆಕ್ಷನ್ 47ಂ(1) ಪ್ರಕಾರ ಫ್ರಾಡ್ಸ್ ಕ್ಲಾಸಿಫಿಕೇಷನ್ ಆಂಡ್ ರಿಪೋಟಿರ್ಂಗ್ ಆಂಡ್ ಹೌಸಿಂಗ್ ಸೆಕ್ಟರ್ ಅಡಿಯಲ್ಲಿ ನವೋನ್ವೇಷಣೆಯ ಮನೆ ಸಾಲ ವಿತರಣೆಗೆ ಸಂಬಂಧಿಸಿ ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್ ಗೆ 75 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ.
ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ 1949ರ ಸೆಕ್ಷನ್? 46(4)(i) ಮತ್ತು ಸೆಕ್ಷನ್ 47ಂ(1)(ಛಿ) ಪ್ರಕಾರ ಈ ರೀತಿ ದಂಡ ವಿಧಿಸುವ ಅಧಿಕಾರ ಆರ್ ಬಿಐಗೆ ಇದೆ ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 31, 2017ರಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಆರ್ಥಿಕ ಪರಿಸ್ಥಿತಿ ಬಗ್ಗೆ ಕಾನೂನಿನ ಪ್ರಕಾರ ಪರಿಶೀಲನೆ ನಡೆಸಲಾಗಿತ್ತು.


