HEALTH TIPS

ಬಿಎಂಎಸ್ ಸಂಸ್ಥಾಪಕ ದತ್ತೋಪಂತ್ ಠೇಂಗಡಿ ಸಂಸ್ಮರಣಾ ಸಮಾರಂಭ

 
     ಕಾಸರಗೋಡು: ಸಮಾಜಸೇವೆಯಲ್ಲಿ  ಮಾದರಿ ವ್ಯಕ್ತಿತ್ವ ಹೊಂದಿದ್ದ ದತ್ತೋಪಂತ್ ಠೇಂಗಡಿ ದೀನದಲಿತರ ನೋವು ನಲಿವಿಗೆ ಸ್ಪಂದಿಸುವ ಮೂಲಕ ಜನಮನ್ನಣೆಗೆ ಕಾರಣರಾಗಿದ್ದರು ಎಂದು ಬಿಎಂಎಸ್ ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿಎಂ.ಪಿ ರಾಜೀವನ್ ತಿಳಿಸಿದ್ದಾರೆ.
       ಅವರು ಬಿಎಂಎಸ್ ಕಾಸರಗೋಡು ಜಿಲ್ಲಾಸಮಿತಿ ವತಿಯಿಂದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಿನ್ನೆ ನಡೆದ ಬಿಎಂಎಸ್ ಸಂಸ್ಥಾಪಕ ದತ್ತೋಪಂತ್ ಠೇಂಗಡಿ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    2019 ನವೆಂಬರ್ 10ರಿಂದ 2020 ನವೆಂಬರ್ 10ರ ವರೆಗೆ ದತ್ತೋಪಂತ್ ಠೇಂಗಡಿ ಜನ್ಮಶತಮಾನೋತ್ಸವ ಆಚರಿಸಲಾಗುತ್ತಿದ್ದು, ಎಲ್ಲ ಕಾರ್ಯಕರ್ತರು ಇದರ ಯಶಸ್ಸಿಗಾಗಿ ಶ್ರಮಿಸುವಂತೆ ಸಲಹೆ ನೀಡಿದರು. ಬಿಎಂಎಸ್ ಜಿಲ್ಲಾಧ್ಯಕ್ಷ ವಕೀಲ ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇತಾರರಾದ ಕೆ. ನಾರಾಯಣನ್, ಅನಿಲ್ ಬಿ.ನಾಯರ್, ವಿ.ಗೋವಿಂದನ್,ಪಿ.ಬಿ ಸತ್ಯನಾಥ್, ಬೇಬಿ ಟೀಚರ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎ ಶ್ರೀನಿವಾಸನ್ ಸ್ವಾಗತಿಸಿದರು. ಕೆ.ಎ.ಬಾಬು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries