ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕನ್ನಡದ ಕಣ್ಮಣಿ, ಧೀಮಂತ ನಾಯಕಿ, ಕಸಾಪ ಕೇರಳ ಗಡಿನಾಡ ಘಟಕ ಮಾಜಿ ಅಧ್ಯಕ್ಷೆ ಸಂಸ್ಮರಣಾ ಸಮಾರಂಭ ಅಕ್ಟೋಬರ್ 21ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಹಳೇ ಬಸ್ ನಿಲ್ದಾಣ ಸನಿಹದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಜರುಗಲಿದೆ.
ಹಿರಿಯ ಲೇಖಕ, ಕೃಷಿತಜ್ಞ ಚಂದ್ರಶೇಖರ ಏತಡ್ಕ ಸಂಸ್ಮರಣಾ ಭಾಷಣ ಮಾಡುವರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು. ದಿ. ಡಾ. ಲಲಿತಾ ಎಸ್.ಎನ್ ಭಟ್ ಅವರ ಒಡನಾಟದ ಸವಿ ನೆನಪುಗಳು ವಿಚಾರದಲ್ಲಿ ವಿದ್ವಾಂಸ ರಾಜಗೋಪಾಲ ಪುಣಿಂಚಿತ್ತಾಯ ಹಾಗೂ ಕನ್ನಡಹೋರಾಟಗಾರ ಡಾ. ಗಣಪತಿ ಭಟ್ ಕೆ. ಮಾತನಾಡುವರು. ಡಾ. ಲಲಿತಾ ಎಸ್. ಎನ್ ಭಟ್ ಅವರ ಅಪರಾಜಿತ ಕಾದಂಬರಿ ಕುರಿತು ಸಹಾಯಕ ಪ್ರಾಧ್ಯಾಪಕಿ ವೇದಾವತೀ ಎಸ್. ಉಪನ್ಯಾಸ ನೀಡುವರು.

