ಉಪ್ಪಳ: ಮಂಜೇಶ್ವರ ಉಪಚುನಾವಣೆ ನಡೆಯುತ್ತಿರುವ ಬೆನ್ನಿಗೆ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ಆರ0ಭವಾಗಿದ್ದು ಪೈ ವಳಿಕೆಯ ಕಾಂಗ್ರಸ್ಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ನೇತಾರೆಯೋರ್ವೆ ಬಿಜೆಪಿಗೆ ಸದಸ್ಯತ್ವ ಪಡೆದು ಸಂಚಲನ ಸೃಷ್ಟಿಸಿದರು.
ಕಾಂಗ್ರೆಸ್ಸ್ ಕಾರ್ಯಕತೇ, ಪೈವಳಿಕೆ ಚೇವಾರು ವಾರ್ಡ್ ಪ್ರತಿನಿಧಿ ವಸಂತಿ ಯಾದವ್ ಚೇರಾಲು ಬಿಜೆಪಿ ಸದಸ್ಯತ್ವ ಪಡೆದು ರಾಜಕೀಯ ಕುತೂಹಲಕ್ಕೆ ಕಾರಣರಾಗಿದ್ದಾರೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯರೂ, ಎನ್ ಡಿ ಎ ಸ್ಥಾನಾರ್ಥಿ ರವೀಶ ತಂತ್ರಿ ಕುಂಟಾರು ಸದಸ್ಯತ್ವ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ಪೈವಳಿಕೆಯಲ್ಲಿ ಎಡ-ಬಲ ರಂಗಗಳ ಒಳ ಒಪ್ಪಂದ ಮತ್ತು ಇತರ ಕಾರಣಗಳಿಂದ ಬೇಸತ್ತು ಕಾಂಗ್ರೆಸ್ಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸದಸ್ಯತ್ವ ಪಡೆದಿರುವುದಾಗಿ ವಸಂತಿ ಯಾದವ್ ಅವರು ಪ್ರತಿಕ್ರಿಯಿಸಿದ್ದಾರೆ. ಸೋಮವಾರ ನಡೆಯುವ ಉಪ ಚುನಾವಣೆಗೆ ಗಂಟೆಗಳಷ್ಟೇ ಬಾಕಿ ಇದ್ದಾಗ ನಡೆದ ಇಂತಹ ಬೆಳವಣಿಗೆ ಕಾಂಗ್ರೆಸ್ಸ್ ಪಕ್ಷಕ್ಕೆ ಪ್ರತಿಕೂಲವಾಗಿ ಬಾಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


