ಬದಿಯಡ್ಕ: ಮದುವೆ ಸಂಭ್ರಮವೊಂದಕ್ಕೆ ಆಗಮಿಸಿದ ಗೆಳೆಯರ ಅಪ್ರಬುದ್ಧ ನಡವಳಿಕೆಯಿ0ದ ಸ0ಭ್ರಮ ಸಂಘರ್ಷಕ್ಕೆ ಕಾರಣವಾದ ಘಟನೆ ಭಾನುವಾರ ನೀರ್ಚಾಲಿನಲ್ಲಿ ನಡೆದಿದೆ.
ನೀರ್ಚಾಲಿನ ಶಾಲಾ ಬಳಿ ನಿವಾಸಿ ಮೊಹಮ್ಮಡ್ ಮೊಹಮ್ಮದ್ ಅಶ್ರಫ್ ಎಂಬವರ ವಿವಾಹ ಭಾನುವಾರ ಪುತ್ತಿಗೆ ಮುಗುವಿನ ತರುಣಿಯೊಂದಿಗೆ ನೆರವೇರಿತ್ತು. ಮಧ್ಯಾಹ್ನ ಭೋಜನದ ಬಳಿಕ 3 ರ ಸುಮಾರಿಗೆ ಮದುಮಗಳ ತವರಿಗೆ ತೆರಳುವ ವೇಳೆ ಮದುಮಗನ ಮಿತ್ರರು ಬದಿಯಡ್ಕ-ಕು0ಬಳೆ ರಸ್ತೆಯಲ್ಲಿ ವಾಹನ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ನೀರ್ಚಾಲು ಮೇಲಿನ ಪೇಟೆಯಲ್ಲಿ ಘಟನೆ ನಡೆದಿದೆ. ಮೇಲಿನ ಪೇಟೆಯಲ್ಲಿ ಎದುರು ಭಾಗದಿ0ದ ಬೈಕ್ ಮೂಲಕ ಆಗಮಿಸಿದ ವ್ಯಕ್ತಿ ದಾರಿಗಾಗಿ ನುಗ್ಗಿದ್ದಾನೆಂದೂ, ಉಗುಳಿರುವನೆಂದೂ ಮೆರವಣಿಗೆಯಲ್ಲಿದ್ದವರು ತಡೆದು ಹಲ್ಲೆಗೈಯ್ದರು. ಈ ವೇಳೆ ಸ್ಥಳೀಯ ಯುವಕನೋರ್ವ ಆಗಮಿಸಿದಾಗ ಸಂಘರ್ಷ ಇನ್ನಷ್ಟು ಬಿಗಡಾಯಿಸಿತು. ಬಳಿಕ ಪೋಲೀಸರು ಆಗಮಿಸಿ ಗು0ಪು ಚದುರಿಸಿದರು. ಬದಿಯಡ್ಕ ಪೋಲೀಸರು ದೂರು ದಾಖಲಿಸಿ ತನಿಖೆಗೆ ಚಾಲನೆ ನೀಡಿರುವರು. ಹಲ್ಲೆಗೈದ ಯುವಕರ ಹತ್ತರಷ್ಟು ಮಂದಿಯನ್ನು ಗುರುತಿಸಲಾಗಿದೆ ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ.


