ಕುಂಬಳೆ: ಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನ ಮತ್ತು ಶ್ರೀ ಧೂಮಾವತಿ ಪರಿವಾರ ದೈವ ಕ್ಷೇತ್ರದ ವಾರ್ಷಿಕ ಆಡಳಿತ ವ್ಯವಸ್ಥೆಯ ಹಸ್ತಾಂತರ ಪ್ರಕ್ರಿಯೆಯ ಅಂಗವಾಗಿ ಅ.26 ಮತ್ತು 27 ರಂದು ಪದಿಚ್ಚಲು ಕೋಲ ನಡೆಯಿತು. ಕೋಲದ ಕೊನೆಯಲ್ಲಿ ಹತ್ತು ಸಮಸ್ತರ ಸಮಕ್ಷಮದಲ್ಲಿ ಹತ್ತು ಸಮಸ್ತರ ತೀರ್ಮಾನ ಪ್ರಕಾರ ನೂತನ ಅಡಳಿತೆದಾರರಿಗೆ ಧರ್ಮ ದೈವದ ಅಪ್ಪಣೆಯಾಗಿ ಆಡಳಿತ ಹಸ್ತಾಂತರ ನಡೆಯಿತು. ಪ್ರಸ್ತುತ ಆಡಳಿತೆದಾರರಾದ ಕಟ್ಟಂಪಾಡಿ ಮಹೇಶ ಭಟ್ ಅವರು ಅರ್ಚಕ ಮನೆತನದ ನಾಣಿತ್ತಿಲು ಗೋವಿಂದ ಭಟ್ ಅವರಿಗೆ ಆಡಳಿತೆಯನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದ ಅಂಗವಾಗಿ ಅ.26 ರಂದು ಸಂಜೆ ಭಂಡಾರ ಬಂದು ದೇವರಿಗೆ ಮಹಾಪೂಜೆ, ದೈವದ ತೊಡಂಙಲ್ ನೆರವೇರಿತು. ಬಳಿಕ ಬಲಿವಾಡು ಕೂಟ ಅನ್ನ ಸಂತರ್ಪಣೆ ನಡೆಯಿತು. ಅ.27 ರಂದು ಶ್ರೀಧೂಮಾವತಿ ದೈವದ ಪಡಿಚ್ಚಲು ಕೋಲ, ಪ್ರಸಾದ ವಿತರಣೆ ನಡೆಯಿತು.


