ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಕಲೋತ್ಸವ ಇತ್ತೀಚೆಗೆ ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಿಶ್ವನಾಥ ಕೆ, ದೈಹಿಕ ಶಿಕ್ಷಕ ಕೆ.ಎಂ. ಬಲ್ಲಾಳ್ ಶುಭಾಶಂಸನೆಗೈದರು. ಕಾರ್ಯಕ್ರಮ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಎಂ ಎಸ್ ಸ್ವಾಗತಿಸಿ, ಸಹಸಂಚಾಲಕ ಜಯೇಶ್ ವಂದಿಸಿದರು. ಎರಡು ದಿನಗಳಲ್ಲಾಗಿ ನಡೆದ ಸ್ಪರ್ಧೆಗಳಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದರು.






