ಮಂಜೇಶ್ವರ: ತೊಟ್ಟೆತ್ತೋಡಿ ವಾಣಿ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೃತ್ಯ ಹಾಗು ಸುಗಮ ಸಂಗೀತ ತರಬೇತಿಯನ್ನು ಈ ಶಾಲೆಯ ಹಳೆ ವಿದ್ಯಾರ್ಥಿನಿಯಾದ ದೀಪಿಕ ಭಟ್ ಮಿತ್ತಾಳ ಆರಂಭಿಸಿದರು.
ಶಾಲಾ ಪ್ರಬಂಧಕ ಮಾತೃಶ್ರೀ ಪ್ರೇಮಾ ಕೆ.ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಾಟ್ಯ ಗುರು ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರ ಶಿಷ್ಯೆಯಾದ ಈಕೆ ಗಣೇಶ ಭಟ್ ಮತ್ತು ಗೀತಾಲಕ್ಷ್ಮಿ ದಂಪತಿಗಳ ಪುತ್ರಿ. ತೊಟ್ಟೆತ್ತೋಡಿ ಶಾಲೆಯ ಹಳೆ ವಿದ್ಯಾರ್ಥಿನಿಯಾದ ಈಕೆ ತಮ್ಮಲ್ಲಿರುವ ಕಲೆಯನ್ನು ಸೇವೆಯಾಗಿ ನೀಡಲು ಆರಂಭಿಸಿದ್ದಾರೆ. ಮಾತೃ ಮಂಡಳಿ ಅಧ್ಯಕ್ಷೆ ದೇವಕಿ, ಪ್ರಿ-ಪ್ರೈಮರಿಯ ಮಾತೃ ಮಂಡಳಿ ಅಧ್ಯಕ್ಷೆ ಮೋಹಿನಿ ಶಾಲಾ ನಿವೃತ್ತ ಅಧ್ಯಾಪಿಕೆ ವಿಜಯಲಕ್ಷ್ಮೀ ಟೀಚರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್ ಶುಭ ಹಾರೈಸಿದರು. ಜಯಲಕ್ಷ್ಮೀ ಟೀಚರ್ ವಂದಿಸಿದರು.





