ಮಧೂರು: ಕಾಸರಗೋಡಿನಲ್ಲಿ ಕನ್ನಡಭಾಷೆ, ಸಂಸ್ಕøತಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದನ್ನು ನಿವಾರಿಸಲು, ಕನ್ನಡವನ್ನು ಸದೃಢಗೊಳಿಸಲು ವಿದ್ಯಾರ್ಥಿಗಳು, ಯುವಜನಾಂಗ ಮುಂದೆ ಬರಬೇಕು. ದಸರಾದಂತಹ ಹಬ್ಬಗಳ ಆಚರಣೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಂಸ್ಕøತಿಯ ಮೇಲೆ ಪ್ರೀತಿ, ಅಭಿಮಾನ ಮೂಡಿಸಲು ಸಹಕಾರಿ ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀಹರಿ ಎನ್. ಹೇಳಿದರು.
ಕೂಡ್ಲು ಹೈಸ್ಕೂಲ್‍ನಲ್ಲಿ ನಡೆದ ದಸರಾ ನಾಡಹಬ್ಬದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಸರಾ ನಾಡಹಬ್ಬದಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅವರು ಬಹುಮಾನ ವಿತರಿಸಿದರು.
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಧ್ಯಾಪಕ ವೃಂದದ ಕಾರ್ಯದರ್ಶಿ ಎಂ.ನರಸಿಂಹ ಮಯ್ಯ, ಅಧ್ಯಾಪಕರಾದ ಹರ್ಷ ಕುಮಾರ ಎಂ, ಮುರಲೀಧರ ಶರ್ಮ, ಶಿಕ್ಷಕಿಯರಾದ ಮಮತ ಕುಮಾರಿ, ಉಷಾ ಕುಮಾರಿ, ಆಶಾ ಕುಮಾರಿ, ಭ್ರಮರಾಂಬಿಕಾ, ರೇಖಾ ಎ.ವಿ. ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಲತಾ ಕೆ. ಸ್ವಾಗತಿಸಿ, ವೇಣು ಗೋಪಾಲ ಮಾಸ್ತರ್ ಕೂಡ್ಲು ವಂದಿಸಿದರು.





