HEALTH TIPS

ಜೀರ್ಣೋದ್ಧಾರ ಸಮಿತಿ ರೂಪೀಕರಣದ ಸಮಾಲೋಚನಾ ಸಭೆ

             ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ಬಳಿಯಿರುವ ಅತ್ಯಂತ ಪುರಾತನ ಹಾಗೂ ಕಾರಣೀಕದಿಂದ ಕೂಡಿರುವ ಆದಿ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿರುವ ಆದಿ ಕ್ಷೇತ್ರ ಶ್ರೀ ರಕ್ತೇಶ್ವರಿ ದೈವಸ್ಥಾನವು 16 ವರ್ಷಗಳ ಹಿಂದೆ ಪುನರ್ ನಿರ್ಮಾಣಗೊಂಡು ದೀಪ ಪ್ರತಿಷ್ಠೆ ಕಲಶಾಭಿಷೇಕ ಮುಂತಾದ ಕಾರ್ಯಕ್ರಮಗಳು ಅತ್ಯಂತ ವಿಜ್ರಂಭಣೆಯಿಂದ ನಡೆದಿದ್ದು ಪ್ರಸ್ತುತ ದೇವಸ್ಥಾನವು ಜೀರ್ಣೋದ್ಧಾರಗೊಂಡು ಮತ್ತು ಪುನ: ಪ್ರತಿಷ್ಠೆ ಕಾರ್ಯಕ್ರಮಗಳು ನಡೆಯಬೇಕಾಗಿರುವುದರಿಂದ ಕ್ಷೇತ್ರಕ್ಕೆ ಸಂಬಂ„ಸಿದ ಊರ ಮಹಾ ಜನರನ್ನ ಒಳಗೊಂಡ ಜೀಣೋದ್ಧಾರ ಸಮಿತಿಯ ರೂಪೀಕರಣದ ಸಮಾಲೋಚನಾ ಸಭೆ ಸದ್ರಿ ಕ್ಷೇತ್ರದ ಬಳಿ ಇರುವ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಜರಗಿತು.
      ಪದ್ಮನಾಭ ಆಚಾರ್ಯ ಬಾಡೂರು ಅಧ್ಯಕ್ಷತೆ ವಹಿಸಿದರು. ಈ ವೇಳೆ ಜೀಣೋದ್ಧಾರ ಸಮಿತಿಯ ರೂಪೀಕರಣ ನಡೆಯಿತು. ಕ್ಷೇತ್ರದ ಮೊಕ್ತೇಸರರಾಗಿ ರಾಘವ ಆಚಾರ್ಯ ಪುತ್ತೂರು, ಗಂಗಾಧರ ಆಚಾರ್ಯ ಕೋಟೆಕ್ಕಾರು, ಪುರುಷೋತ್ತಮ ಆಚಾರ್ಯ ಕಾಸರಗೋಡು, ಗೌರವಾಧ್ಯಕ್ಷರಾಗಿ ಬಿ.ಎನ್.ಸುಬ್ರಹ್ಮಣ್ಯ ಬಾಡೂರು, ಅಧ್ಯಕ್ಷರಾಗಿ ಪದ್ಮನಾಭ ಕಡಪ್ಪರ, ಕಾರ್ಯಾಧ್ಯಕ್ಷರಾಗಿ ಬಿ.ಎನ್.ಪದ್ಮನಾಭ ಬಾಡೂರು ದೇವರಾಜ್ ಎಂ.ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಆಚಾರ್ಯ ಕೊಯಂಬತ್ತೂರು ಕೋಶಾ„ಕಾರಿಯಾಗಿ ಚರಣ್‍ರಾಜ್ ಕಾಸರಗೋಡು, ಗೌರವ ಸಲಹೆಗಾರರಾಗಿ ಬಿ.ವಸಂತ ಪೈ ಬದಿಯಡ್ಕ, ಕೃಷ್ಣ ಶಿವಕೃಪಾ ಕುಂಜತ್ತೂರು ಬಿ.ಎನ್.ಉಮೇಶ್ ಬೆಂಗಳೂರು, ಉದಯ ಗುರುಸ್ವಾಮಿ, ಪಾವಳ ಶೇಷಪ್ಪ ಸಾಲಿಯಾನ್ ವಾಮಂಜೂರು, ಬಿ.ಪಿ ಗೋಪಾಲಕೃಷ್ಣ ಬೆಂಗಳೂರು, ರುದ್ರಪ್ಪ ಮೇಸ್ತ್ರಿ ಅಂಗಡಿಪದವು, ಬಿ.ಎಂ.ಹೈಮೇಶ್, ಬಿ.ಎಂ.ದಿನಕರ್ ಹೊಸಂಗಡಿ, ಬಿ.ಎಂ.ಮೋಹನ್‍ದಾಸ್ ಹೊಸಂಗಡಿ, ಪ್ರಧಾನ ಸಂಚಾಲಕರಾಗಿ ಹರೀಶ್ ಶೆಟ್ಟಿ ಮಾಡ, ಸಂಚಾಲಕರಾಗಿ ಬಿ.ಪಿ.ಮನೋಹರ ಕಾಸರಗೋಡು, ಕೃಷ್ಣ ಜಿ. ಮಂಜೇಶ್ವರ, ಬಿ.ಜಿ.ಗೌರವ್ ಆಚಾರ್ಯ ಯು.ಎಸ್.ಎ, ಉಪಾಧ್ಯಕ್ಷರಾಗಿ ನ್ಯಾಯವಾದಿ ನವೀನ್‍ರಾಜ್ ಕೆ.ಜೆ, ಚಂದ್ರಹಾಸ ಪೆಲಪ್ಪಾಡಿ, ರಮೇಶ ಆಚಾರ್ಯ ಕಾಸರಗೋಡು, ನಿತ್ಯಾನಂದ ಆಚಾರ್ಯ ಪುತ್ತೂರು, ನಾಗೇಶ್ ಕೋಟೆಕಾರು, ದೇವದಾಸ್ ಪುತ್ತೂರು, ಮೂವಾಜೆ ಶಶಿಧರ ಆಚಾರ್ಯ, ಚಪ್ಪರ ಮನೆ ಗೋಪಾಲಕೃಷ್ಣ ಕುಮ್ಮಾಯಿ, ಕಾರ್ಯದರ್ಶಿಗಳಾಗಿ ಆದರ್ಶ್ ಬಿ.ಎಂ, ಅವಿನಾಶ್ ಹೆಗ್ಡೆ ಮಂಜೇಶ್ವರ, ನರೇಂದ್ರ ಹೆಗ್ಡೆ ಹೊಸಂಗಡಿ, ರಾಜೇಶ್ ಪುತ್ತೂರು, ಭಾಸ್ಕರ ಅಂಗಡಿಪದವು, ಶಿವಪ್ರಸಾದ್ ಪೆಲಪ್ಪಾಡಿ, ಕಾರ್ತಿಕ್ ಸೀತಾಂಗೋಳಿ, ರಮೇಶ್ ಬಿ.ಎಂ.ಹೊಸಂಗಡಿ, ಅರ್ಚಕರಾಗಿ ಪುರೋಹಿತ  ತಿರುಮಲೇಶ  ಆಚಾರ್ಯ ಹೊಸಂಗಡಿ, ಪುರೋಹಿತ ನಿರಂಜನ ಆಚಾರ್ಯ ನೀರ್ಚಾಲು, ಲೆಕ್ಕ ಪರಿಶೋಧಕರಾಗಿ ಧನುಷ್ ಕಾಸರಗೋಡು ಹಾಗು ಸದಸ್ಯರನ್ನು ಆರಿಸಲಾಯಿತು.
               ಬಿ.ಎನ್.ಪದ್ಮನಾಭ ಬಾಡೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಶವಂತ ಆಚಾರ್ಯ ಕೊಯಂಬತ್ತೂರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries