ಮಂಜೇಶ್ವರ: ಮಂಗಳವಾರ ಉಪ ಚುನಾವಣೆ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು ಮತ ಎಣಿಕೆ ನಡೆಯುತ್ತಿದ್ದು, ಎರಡನೇ ಸುತ್ತು ಪೂರ್ತಿಗೊಳ್ಳುತ್ತಿರುವಂತೆ ಯುಡಿಎಫ್ 2714 ಮತಗಳಿಂದ ಪ್ರಥಮ ಸ್ಥಾನದಲ್ಲಿದ್ದು, ಬಿಜೆಪಿ ದ್ವಿತೀಯ, ಎಲ್ ಡಿ ಎಫ್ ತೃತೀಯ ಸ್ಥಾನದಲ್ಲಿದೆ.
ಪೈವಳಿಕೆ ನಗರ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ಆರಂಭಗೊಂಡಿರುವ ಮತ ಎಣಿಕಾ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಮತ ಎಣಿಕೆ ಆರಂಭಗೊಂಡು ಒಂದನೇ ಹಂತ ಪೂರ್ತಿಗೊಳ್ಳುತ್ತಿರುವಂತೆ ಮತ ಗಳಿಕೆಯಲ್ಲಿ ಗೊಂದಲ ಉಂಟಾಯಿತು.ಬಳಿಕ ಮತ್ತೆ ಒಂದನೇ ಹಂತದ ಎಣಿಕೆ ಮತ್ತೆ ಮಾಡಲಾಯಿತು.
ವೆಟ್ಟಿಯೂರ್ ಕಾವ್, ಕೋನ್ನಿಯಲ್ಲಿ ಎಡರಂಗ ಮುಂದಿದೆ. ಅರೂರ್, ಎರ್ನಾಕುಳಂ ಗಳಲ್ಲಿ ಯುಡಿಎಫ್ ಎರಡು ಹಂತಗಳ ಮತ ಎಣಿಕೆಯಲ್ಲಿ ಮುಂದಿದೆ ಎಂದು ತಿಳಿದುಬಂದಿದೆ.


