ಮಂಜೇಶ್ವರ: ಉಪ ಚುನಾವಣೆ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ ಮತ ಎಣಿಕೆ ಮುಂದುವರಿಯುತ್ತಿದ್ದು, ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಅವರು 19932 ಮತಗಳಿಂದ ಪ್ರಥಮ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ 16609 ಮತಗಳಿಂದ ದ್ವಿತೀಯ, ಎಡರಂಗದ ಎಂ.ಶಂಕರ ರೈ ಅವರು 9595 ಮತಗಳಿಂದ ಮೂರನೇ ಸ್ಥಾನದಲ್ಲಿದ್ದಾರೆ.
ಪೈವಳಿಕೆ ನಗರ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ಆರಂಭಗೊಂಡಿರುವ ಮತ ಎಣಿಕಾ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ವೆಟ್ಟಿಯೂರ್ ಕಾವ್, ಕೋನ್ನಿಯಲ್ಲಿ ಎಡರಂಗ ಮುಂದಿದೆ. ಅರೂರ್, ಎರ್ನಾಕುಳಂ ಗಳಲ್ಲಿ ಯುಡಿಎಫ್ ಎರಡು ಹಂತಗಳ ಮತ ಎಣಿಕೆಯಲ್ಲಿ ಮುಂದಿದೆ ಎಂದು ತಿಳಿದುಬಂದಿದೆ.


