ಮುಳ್ಳೇರಿಯ: ದ್ರಾವಿಡ ಬ್ರಾಹ್ಮಣ ಸಂಘ ಕಾಸರಗೋಡು ಬೋವಿಕ್ಕಾನ ಇದರ ಸಭೆ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಭಾಭವನದಲ್ಲಿ ಬುಧವಾರ ಜರಗಿತು.
ಪಾಂಡುರಂಗ ಭಟ್ ಆನೆಮಜಲು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಂಘದ ವತಿಯಿಂದ ಬೋವಿಕ್ಕಾನದಲ್ಲಿ ಕಾರ್ಯಾಚರಿಸುತ್ತಿರುವ ವಾಣಿಜ್ಯ ಸಂಕೀರ್ಣದ ಮುಂದಿನ ಯೋಜನೆಗಳ ಬಗ್ಗೆ ರಾಜೇಶ್ ಮಜಕ್ಕಾರ್ ವಿಷಯ ಪ್ರಸ್ತಾವನೆ ಮಾಡಿ ಆ ಕುರಿತು ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಶಂಕರನಾರಾಯಣ ಹೊಳ್ಳ ಶುಭಾಶಂಸನೆಗೈದರು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಟ್ರಸ್ಟಿ ಆನೆಮಜಲು ವಿಷ್ಣು ಭಟ್ ಅವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾರ್ಗದರ್ಶನಗಳನ್ನು ನೀಡಿದರು.
ಡಾ.ಸುಬ್ರಾಯ ಭಟ್, ಪ್ರಸಾದ್ ಗ್ರೂಪ್ ರಾಮ್ ಪ್ರಸಾದ್ ಕಾಸರಗೋಡು, ರಾಜಾರಾಮ ಪೆರ್ಲ ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಪ್ರಭಾಕರ ಭಟ್ ಮಜಾಕ್ಕಾರ್ ಇವರು ಪ್ರಾರ್ಥನೆ ಮಾಡಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ಮುರಳಿಕೃಷ್ಣ ಸ್ಕಂದ ಅವಲೋಕನಾ ವರದಿಯನ್ನಿತ್ತು ಆಯವ್ಯಯ ಮಾಹಿತಿಗಳನ್ನು ನೀಡಿದರು. ವಿಷ್ಣುಮೋಹನ ಐಲ್ಕುಂಜೆ ಸಭೆ ನಿರ್ವಹಿಸಿದರು.