HEALTH TIPS

ಪಿ.ಎಸ್.ಸಿ. ಪರೀಕ್ಷೆಯಲ್ಲಿ ಅವ್ಯವಹಾರ ಯತ್ನ : ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ


       ಕುಂಬಳೆ:  ಕೇರಳ ಲೋಕಸೇವಾ ಆಯೋಗದ (ಪಿ.ಎಸ್.ಸಿ.) ಪರೀಕ್ಷೆಯನ್ನು ಬುಡಮೇಲುಗೊಳಿಸಲು ಸರ್ಕಾರ ಮತ್ತೆ ಯತ್ನಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
     ಕನ್ನಡ ಬಲ್ಲ ಎಲ್.ಡಿ. ಕ್ಲಾರ್ಕ್ ಹುದ್ದೆಯ ನೇಮಕಾತಿಗಾಗಿ ಅಕ್ಟೋಬರ್ 22 ರಂದು ಕಾಸರಗೋಡಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಎಲ್.ಡಿ. ಕ್ಲಾರ್ಕ್ ಹುದ್ದೆಗಿರುವ ಪರೀಕ್ಷೆ ಕೇಂದ್ರವನ್ನು ಈಗ ಕಣ್ಣೂರಿಗೆ ಬದಲಾಯಿಸಿರುವುದು ಪರೀಕ್ಷೆಯನ್ನು ಬುಡಮೇಲುಗೊಳಿಸುವ ಯತ್ನದ ಭಾಗವಾಗಿದೆ. ಈ ಹುದ್ದೆಗಾಗಿ 8000 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 6000 ಮಂದಿಯ ಪರೀಕ್ಷಾ ಕೇಂದ್ರವನ್ನು ಕಣ್ಣೂರಿಗೆ ಬದಲಾಯಿಸಲಾಗಿದೆ. ತಿರುವನಂತಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಎಸ್.ಎಫ್.ಐ. ಕಾರ್ಯಕರ್ತರಿಗೆ ಪೆÇಲೀಸ್ ಹುದ್ದೆಗೆ ಪಿ.ಎಸ್.ಸಿ. ಲಿಖಿತ ಪರೀಕ್ಷಾ ಕೇಂದ್ರವನ್ನು ಕಾಸರಗೋಡಿನಲ್ಲಿ ಏರ್ಪಡಿಸಿ ಬಳಿಕ ಅವರಿಗೆ ತಿರುವನಂತಪುರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ರೀತಿಯ ಅವ್ಯವಹಾರವನ್ನು ಈಗ ಎಲ್.ಡಿ. ಕ್ಲಾರ್ಕ್ ಪರೀಕ್ಷೆಯಲ್ಲೂ ನಡೆಸಲು ಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿ.ಎಸ್.ಸಿ. ನಡೆಸುತ್ತಿರುವ ಇಂತಹ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries