HEALTH TIPS

ಉಪ ಚುನಾವಣೆಯಲ್ಲಿ ಮತದಾನ: ಅತ್ಯಧಿಕ ಪಡ್ರೆಯ ಮತಗಟ್ಟೆಯಲ್ಲಿ- ಅತಿಕಡಿಮೆ ಆರಿಕ್ಕಾಡಿಯ ಮತಗಟ್ಟೆಯಲ್ಲಿ


     ಮಂಜೇಶ್ವರ/ಕುಂಬಳೆ: ಸೋಮವಾರ ನಡೆದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಡ್ರೆ ಪ್ರದೇಶದ ಮತಗಟ್ಟೆಗಳಲ್ಲಿ ಅತ್ಯಧಿಕ ಮತದಾನ ನಡೆದಿದೆ.
            ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 198ನೇ ಬೂತ್ ನಲ್ಲಿ ಶೇ 86.5 ಮತದಾನ, ಪಡ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 197ನೇ ಬೂತ್ ನಲ್ಲಿ ಶೇ 84.7 ಮತದಾನ ನಡದಿರುವುದು ದಾಖಲೆಯಾಗಿದೆ. ಒಟ್ಟು ಇರುವ 198 ಮತಗಟ್ಟೆಗಳಲ್ಲಿ 41 ಬೂತ್ ಗಳಲ್ಲಿ ಶೇ 80ಕ್ಕಿಂತ ಅಧಿಕ ಮತದಾನ ನಡೆದಿದೆ.
       ಅತಿ ಕಡಿಮೆ ಮತದಾನ ಕುಂಬಳೆಯ ಆರಿಕ್ಕಾಡಿ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 133ನೇ ಮತಗಟ್ಟೆಯಲ್ಲಿ. ಇಲ್ಲಿ ಶೇ 66.2 ಮತದಾನ ನಡೆದಿರುವುದು ದಾಖಲೆಯಾಗಿದೆ.
   ಪಡ್ರೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 198ನೇ ಬೂತ್ ನ ಮತದಾತರ ಪಟ್ಟಿಯಲ್ಲಿ 815 ಮಂದಿಯಲ್ಲಿ 365 ಮಂದಿ ಮಹಿಳೆಯರು, 340 ಮಂದಿ ಪುರುಷರು ಸಹಿತ 705 ಮಂದಿ ಮತಚಲಾವಣೆ ನೆಸಿದ್ದಾರೆ. ಪಡ್ರೆ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯ 197ನೇ ಮತಗಟ್ಟೆಯಲ್ಲಿ ಮತದಾತರ ಪಟ್ಟಿಯಲ್ಲಿ 876 ಮಂದಿ ಮತದಾರರಲ್ಲಿ, 742 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 394 ಮಂದಿ ಪುರುಷರು, 348 ಮಂದಿ ಮಹಿಳೆಯರು ಇದ್ದಾರೆ.
     ಅತಿ ಕಡಿಮೆ ಮತಚಲಾವಣೆಯಾಗಿರುವ ಆರಿಕ್ಕಾಡಿ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 133ನೇ ಮತಗಟ್ಟೆಯಲ್ಲಿ 923 ಮಂದಿ ಮತದಾತರಲ್ಲಿ 338 ಮಂದಿ ಮಹಿಳೆಯರು, 273 ಮಂದಿ ಪುರುಷರ ಸಹಿತ 611 ಮಂದಿ ಮತದಾನ ಮಾಡಿದ್ದಾರೆ.
     ಕುಂಬಳೆ ಬಳಿಯ ಕಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 177ನೇ ಮತಗಟ್ಟೆಯಲ್ಲಿ ಶೇ 84.48, ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ 177ನೇ ಮತಗಟ್ಟೆಯಲ್ಲಿ ಶೇ 83.92, ಇಚ್ಲಂಪಾಡಿ ಅನುದಾನಿತ ಹಿರಿಯ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 136ನೇ ಮಗಟ್ಟೆಯಲ್ಲಿ ಶೇ 82.99 ಮತದಾನ ನಡೆದಿದೆ. ಉಜಾರ್ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 129ನೇ ಮತಗಟ್ಟೆಯಲ್ಲಿ ಶೇ 61.18, ಕುರ್ಚಿಪಳ್ಳ ಸರ್ಕಾರಿ ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯ 79ನೇ ಮತಗಟ್ಟೆಯಲ್ಲಿ ಶೇ 67.72, ಮೊಗ್ರಾಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 157ನೇ ಮತಗಟ್ಟೆಯಲ್ಲಿ ಶೇ 67.74, ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 70ನೇ ಮತಗಟ್ಟೆಯಲ್ಲಿ ಶೇ 67.77, ಶಿರಿಯ ಸರ್ಕಾರಿ ಪ್ರೌಢಶಾಲೆಯ 98ನೇ ಮತಗಟ್ಟೆಯಲ್ಲಿ ಶೇ 67.9 ಮತಚಲಾವಣೆ ಆಗಿದೆ.       
     ಕಳೆದ ಬಾರಿಯ ವಿಧಾನಸಭೆಯ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಪ್ರಮಾಣ ಹೆಚ್ಚಳ: ಕೆಲವೆಡೆ ಕಡಿಮೆ!
        ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಮತದಾನದ ಶೇಕಡಾ ಹೆಚ್ಚಿದ್ದರೆ, ಕೆಲವೆಡೆ ಮಾತ್ರ ಶೇ 9 ವರೆಗೆ ಕಡಿಮೆಯಾಗಿರುವುದು ಕಂಡುಬಂದಿದೆ.
      ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 198ನೇ ಮತಗಟ್ಟೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತ ಶೇ 10.72 ಹೆಚ್ಚಳ ಉಂಟಾಗಿದೆ. ಪಡ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 197ನೇ ಮತಗಟ್ಟೆಯಲ್ಲಿ ಶೇ 8.92 ಮತದಾನ ಹೆಚ್ಚಳವಾಗಿದೆ. ಈ ಮತಗಟ್ಟೆಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತದಾನ ನಡೆದಿರುವುದು ದಾಖಲೆಯಾಗಿದೆ. ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ 194ನೇ ಮತಗಟ್ಟೆಯಲ್ಲಿ ಶೇ 8.14, ಇಚ್ಲಂಪಾಡಿ ಅನುದಾನಿತ ಹಿರಿಯ ಬುನಾದಿ ಶಾಲೆಯ 136ನೇ ಮತಗಟ್ಟೆಯಲ್ಲಿ ಶೇ 7.21, ಕೊಡ್ಲಮೊಗರು ಶ್ರೀ ವಾಣಿವಿಜಯ ಪ್ರೌಢಶಾಲೆಯ 45ನೇ ಮತಗಟ್ಟೆಯಲ್ಲಿ ಶೇ 7, ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 54ನೇ ಮತಗಟ್ಟೆಯಲ್ಲಿ ಶೇ 6.9, ಮೀಯಪದವು ಶ್ರೀವಿದ್ಯಾವರ್ದಕ ಪ್ರೌಢಶಾಲೆಯ 61ನೇ ಮತಗಟ್ಟೆಯಲ್ಲಿ ಶೇ 6.89, ಕುಂಜತ್ತೂರು ಕಣ್ವತೀರ್ಥ ಪದವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ಮತಗಟ್ಟೆಯಲ್ಲಿ  6.54 ಮತ  ಹೆಚ್ಚಳ ನಡೆದಿದೆ.
      ಆರಿಕ್ಕಾಡಿ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 133ನೇ ಮತಗಟ್ಟೆಯಲ್ಲಿ ಮತದಾನದ ಪ್ರಮಾಣ ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಲ್ಲಿ ಶೇ 9.58 ಕಡಿಮೆ ಸಂಭವಿಸಿದೆ. ಈ ಮತಗಟ್ಟೆಯಲ್ಲಿ ಈ ಬಾರಿಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅತಿ ಕಡಿಮೆ ಮತಚಲಾವಣೆ ನಡೆದಿರುವುದು ದಾಖಲಾಗಿದೆ.
    ಎಣ್ಮಕಜೆ ಗ್ರಾ.ಪಂ.ಚವರ್ಕಾಡು ಸಮುದಾಯ ಭವನದ 179ನೇ ಮತಗಟ್ಟೆಯಲ್ಲಿ ಶೇ 8.76, ಉಜಾರ್ ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ 129ನೇ ಬೂತ್ ನಲ್ಲಿ ಶೇ 8.6, ಕುರ್ಚಿಪಳ್ಳ ಸರ್ಕಾರಿ ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯ 79ನೇ ಮತಗಟ್ಟೆಯಲ್ಲಿ ಶೇ 8.06, ಮೊಗ್ರಾಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 157ನೇ ಮತಗಟ್ಟೆಯಲ್ಲಿ ಶೇ 8.04 ಮತದಾನ ಕಡಿಮೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries