ಮಂಜೇಶ್ವರ: ಮಂಜೇಶ್ವರ ಉಪಚುನಾವಣೆ ಕಾರಣ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾತರಿಗೆ, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮತ್ತು ಮತಗಟ್ಟೆ ಏಜೆಂಟರ ಹೊರತಾಗಿ ಇತರರಿಗೆ ಪ್ರವೇಶ ನಿಷೇಧಿಸಿರುವುದಾಗಿ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಮತಗಟ್ಟೆ ವ್ಯಾಪ್ತಿಯ ನೂರು ಮೀ. ವ್ಯಾಪ್ತಿಯಲ್ಲಿ ವಾಹನಗಳ ಪ್ರವೇಶಾತಿಗೆ ಅನುಮತಿ ಇರುವುದಿಲ್ಲ. ಆಯಾ
ಮತಗಟ್ಟೆಗಳ ಮತದಾತರರ ಹೊರತುಪಡಿಸಿ, ಉಳಿದವರಿಗೆ ಪ್ರವೇಶಾನುಮತಿಯಿಲ್ಲ. ಉಪಚುನಾವಣೆಗೆ ಚುನಾವಣೆ ಆಯೋಗ ಮಂಜೂರು ಮಾಡಿರುವ ಗುರುತುಚೀಟಿ ಇಲ್ಲದೇ ಇರುವ ಯಾರಿಗೂ ಪ್ರವೇಶಾತಿ ನೀಡುವುದಿಲ್ಲ ಎಂದು ತಿಳಿಸಿರುವರು.

