HEALTH TIPS

ದೆಹಲಿ ಸಂಸತ್‍ಭವನದ ಎದುರು ಎಂಡೋಸಲ್ಫಾನ್ ಸಂತ್ರಸ್ತರ ಧರಣಿಗೆ ತೀರ್ಮಾನ


      ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೆಹಲಿಯ ಸಂಸತ್‍ಭವನದ ಎದುರು ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಎಂಡೋದುಷ್ಪರಿಣಾಮಪೀಡಿತರ ಒಕ್ಕೂಟ ವತಿಯಿಂದ ಧರಣಿ ನಡೆಯಲಿದ್ದು, ದಿನಾಂಕ ಶೀಘ್ರ ಪ್ರಕಟಿಸುವುದಾಗಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.
    ಸುಪ್ರೀಂ ಕೋರ್ಟಿನ 2017ರ ತೀರ್ಪಿನ ಪ್ರಕಾರ ಎಲ್ಲ ಎಂಡೋಸಲ್ಫಾನ್ ಸಂತ್ರಸ್ತರಿಗೆ  ತಲಾ 5ಲಕ್ಷ ರೂ. ಮಂಜೂರುಗೊಳಿಸುವಂತೆ ಕೇರಳಕ್ಕೆ ಆದೇಶಿಸಿದ್ದರೂ, ತೀರ್ಪುಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರದ ಗಮನಸೆಳೆಯಲು ಒಕ್ಕೂಟ ಮುಂದಾಗಿದೆ. 2017ರ ತೀರ್ಪಿನ ಪ್ರಕಾರ ಕೇರಳ ಸರ್ಕಾರ ಪರಿಹಾರ ಮಂಜೂರುಗೊಳಿಸಬೇಕು,  ಪರಿಹಾರ ಮೊತ್ತ ವಿತರಣೆಗೆ ಕೇಂದ್ರ ಸರ್ಕಾರವೂ  ಹೊಣೆಗಾಗರಾಗಿರುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿರುವುದಾಗಿ ಒಕ್ಕೂಟ ಪದಾಧಿಕಾರಿಗಳು ತಿಳಿಸಿದ್ದಾರೆ. ಸಂಸತ್‍ಭವನ ಎದುರು ಧರಣಿಗೆ ಪೂರ್ವಭಾವಿಯಾಗಿ ಜನವರಿ 15ರಿಂದ 30ರ ವರೆಗೆ  ಸಂತ್ರಸ್ತರನ್ನೊಳಗೊಂಡ ಯಾತ್ರೆ ಹಾಗೂ ಸೆಕ್ರೆಟೇರಿಯೆಟ್ ಮಾರ್ಚ್ ನಡೆಸಲು ಒಕ್ಕೂಟ ತೀರ್ಮಾನಿಸಿತು.
     ಸಭೆಯಲ್ಲಿ ಮುನಿಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ, ಪರಿಸರ ಹೋರಾಟಗಾರ್ತಿ ದಯಾಬಾಯಿ, ಅಬ್ದುಲ್ ಮುನೀರ್ ಪಿ.ಎ, ಚಂದ್ರಾವತಿ ಕೆ, ಸಮೀರಾ ಕೆ. ಆಂಟನಿ ಪಿ.ಜೆ, ಓ.ಜೆ ರಾಜು, ಶಾಂತಾ, ಜಾನ್, ಸಇಬಿ ಅಲೆಕ್ಸ್, ಎಂ.ಪಿ ತಂಬಾನ್, ಪಿ.ಬಿ ಅಲೆಕ್ಸ್ ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಅಬ್ದುಲ್‍ಖಾದರ್ ವಂದಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries