ಕುಂಬಳೆ: ಸೈನಿಕ ತರಬೇತಿಗಾಗಿ ಬೆಳಗಿನ ಜಾವ ಜಾಗಿಂಗ್‍ಗೆ ತೆರಳಿದ ದಡ್ಡಂಗಡಿ ಕಂಚಿಲ ನಿವಾಸಿ ವಿಧ್ಯಾರ್ಥಿ ಪ್ರಣಾಮ್ ಭಂಡಾರಿ ಅವರ ಕೊಲೆಗೆ ಯತ್ನಸಿ ಗಂಭೀರ ಹಲ್ಲೆ ಗೊಳಿಸಿದ ಅರೋಪಿಗಳನ್ನು ಅ.24 ರೊಳಗೆ ಬಂಧಿಸಬೇಕೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಉಳುವಾನ ಶಂಕರ ಭಟ್, ಜಿಲ್ಲಾ ಉಪಾಧ್ಯಕ್ಷ ಎ.ಟಿ.ನಾೈಕ್, ಭಜರಂಗದಳ ಜಿಲ್ಲಾ ಸಂಯೋಜಕ್ ಶೈಲೇಶ್ ಅಂಜರೆ, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಭಜರಂಗದಳ ಮಂಜೇಶ್ವರ ಖಂಡ ಸಮಿತಿ ಸಂಯೋಜಕ್ ಪವನ್ ಹೊಸಂಗಡಿ ಮುಂತಾದವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ಆರೋಪಿಯನ್ನು ಶೀಘ್ರ ಬಂಧಿಸದಿದ್ದಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಂಗಳೂರು ಗ್ರಾಮಂತರ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಮಂಜೇಶ್ವರ ಪ್ರಖಂಡ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದೆ.


