ಕಾಸರಗೋಡು: ಪೋಷಕಾಹಾರ ಮಾಸಾಚರಣೆ ಸಮಾಪ್ತಿ ಮತ್ತು ವಿಶ್ವ ಆಹಾರ ದಿನಾಚರಣೆ ಕಾ ಞÂ ಂಗಾಡ್ ಪುರಭವನದಲ್ಲಿ ಬುಧವಾರ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಷಾಂಟಿ , ಶಿಕ್ಷಣ ಉಪನಿರ್ದೇಶಕಿ ಪುಷ್ಪಾ ಕೆ.ವಿ., ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ, ಜಿಲ್ಲಾ ಆಹಾರ ಸುರಕ್ಷೆ ಅಧಿಕಾರಿ ಉದಯ ಶಂಕರ್ ಪಿ.ಯು., ನಗರಸಭೆ ಕಾರ್ಯದರ್ಶಿ ಪಿ.ಎನ್.ಅನೀಷ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಸಿಜೋ ಎಂ.ಜೋಸ್ ಉಪಸ್ಥಿತರಿದ್ದರು. ಐ.ಸಿ.ಡಿ.ಎಸ್.ಜಿಲ್ಲಾ ಪ್ರೋಗ್ರಾಂ ಅಧಿಕಾರಿ ಕವಿತಾರಾಣಿ ರಂಜಿತ್ ಸ್ವಾಗತಿಸಿದರು. ಕಾ?ಂಗಾಡ್ ಸಹಾಯಕ ಸಿ.ಡಿ.ಪಿ.ಒ. ಶೈಲಜಾ ವಂದಿಸಿದರು.
ಸಾಮೂಹಿಕ ಅನ್ನಪ್ರಾಶನ:
ಕಾರ್ಯಕ್ರಮ ಅಂಗವಾಗಿ 6 ತಿಂಗಳ ವಯೋಮಾನದ ಮಕ್ಕಳಿಗೆ ಪೋಷಕಾಹಾರ "ಚೋರೂಣ್-ಕುಂಜಾಣ್(ಅನ್ನಪ್ರಾಶನ)" ಸಾಮೂಹಿಕ ಕಾರ್ಯಕ್ರಮ ಜರುಗಿತು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯ್ ಅವರು ತಮ್ಮ ಮಗು ಅರ್ನವ್ ಗೆ ಅನ್ನಪ್ರಾಶನ ನಡೆಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ನಂತರ ಸುಮಾರು 120 ಮಂದಿ ತಾಯಂದಿರು ತಮ್ಮ ಮಕ್ಕಳಿಗೆ ಪ್ರಥಮಬಾರಿಗೆ ಅನ್ನಪ್ರಾಶನ ಮಾಡಿಸಿದರು. ಜಾತಿ-ಮತ-ಭೇದಗಳಿಲ್ಲದೆ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


