HEALTH TIPS

ವಿವಿಧೆಡೆ ಕೈಕೊಟ್ಟ ಮತಯಂತ್ರ-ಮತದಾನ ವಿಳಂಬ

 
    ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಉಪ ಚುನಾವಣೆ ಸೋಮವಾರ ಬೆಳಿಗ್ಗೆ 7ಕ್ಕೆ ಆರಂಭಗೊಳ್ಳುತ್ತಿರುವಂತೆ ಹಲವೆಡೆ ಮತ ಯಂತ್ರಗಳು ಕೈಕೊಟ್ಟ ಘಟನೆಗಳು ನಡೆದಿವೆ. ಮೀಂಜ, ಮಂಜೇಶ್ವರ, ಮಂಗಲ್ಪಾಡಿ, ಪೈವಳಿಕೆ ಗ್ರಾಮ ಪಂಚಾಯತಿಗಳ ವಿವಿಧ ಮತಗಟ್ಟೆಗಳಲ್ಲಿ ಮತಯಂತ್ರಗಳು ವ್ಯವಸ್ಥಿತವಾಗಿ ಕಾರ್ಯವೆಸಗದಿದ್ದರಿಂದ ಅರ್ಧದಿಂದ ಒಂದೂವರೆ ಗಮಟೆಗಳಷ್ಟು ಮತದಾನ ವಿಳಂಬಗೊಂಡಿತು. ಮುಂಜಾನೆಯೇ ಆಗಮಿಸಿ ಸರದಿಯಲ್ಲಿ ನಿಂತಿದ್ದ ಹಲವರು ಇದರಿಂದ ತೊಂದರೆಗೊಳಗಾದರು.
   ಮೀಂಜ ಗ್ರಾ.ಪಂ.ನ ಕುಳೂರು 54ನೇ ಮತಗಟ್ಟೆಯಲ್ಲಿ ಆರಂಭದ ಮತ ಚಲಾಯಿಸುತ್ತಿರುವಂತೆ ಯಂತ್ರ ಹಾನಿಗೊಳಗಾಗಿರುವುದು ಸಮಸ್ಯೆಗೆ ಕಾರಣವಾಯಿತು. ಬಂಗ್ರಮಂಜೇಶ್ವರ ಸರ್ಕಾರಿ ಹೈಯರ್ ಸೆಕೆಮಡರಿ ಶಾಲೆಯ 26ನೇ ಮತಗಟ್ಟೆಯಲ್ಲಿ, ಮಂಗಲ್ಪಾಡಿ ಗ್ರಾ.ಪಂ. ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಒಟ್ಟು ನಾಲ್ಕು ಮತಗಟ್ಟೆಗಳಲ್ಲಿ ಯಂತ್ರಗಳು ಹಾನಿಗೊಳಗಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದೇ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟು ಬೆಳಿಗ್ಗೆ 10ರ ವರೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿರಲಿಲ್ಲ. ಮುಳಿಂಜ ಶಾಲೆಯ ಒಂದು, ಪೈವಳಿಕೆ ಕುಡಾಲುಮೇರ್ಕಳದ ಒಂದು ಮತಗಟ್ಟೆಗಳಲ್ಲಿ ಯಂತ್ರ ಕೈಕೊಟ್ಟು ಮತದಾರರಿಗೆ ತೊಂದರೆಯಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries