ಕಾಸರಗೋಡು: ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಅಡ್ಕತ್ತಬೈಲಿನಲ್ಲಿ ಮುಗುಚಿಬಿದ್ದು ಆತಂಕ್ಕೆಡೆಯಾದ ಅನಿಲ ಟ್ಯಾಂಕರ್ ನಿಂದ ಅನಿಲವನ್ನು ವಿಲೇವಾರಿಗೊಳಿಸುವ ಪ್ರಕ್ರಿಯೆ ಸಾಗುತ್ತಿದ್ದು, ಸಂಜೆ ವೇಳೆಗೆ ಪೂರ್ತಿಯಾಗಿ ಹೆದ್ದಾರಿ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳೂರಿನ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ನ ತಜ್ಞರ ತಂಡ ಆಗಮಿಸಿ ಉರುಳಿಬಿದ್ದ ಟ್ಯಾಂಕರ್ ನಿಂದ ಮತ್ತೊಂದು ಟ್ಯಾಂಕರ್ ಗೆ ಸುರಕ್ಷಿತವಾಗಿ ಅನಿಲ ತುಂಬಿಸುವಲ್ಲಿ ನಿರತವಾಗಿದೆ. 18 ಟನ್ ಅಡುಗೆ ಅನಿಲ ಟ್ಯಾಂಕರ್ ಉರುಳಿ ಆತಂಕ ಸೃಷ್ಟಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಸ್ಥಳಾಂತರಿಸಿ, ಇತರ ಸುರಕ್ಷಿತ ಕ್ರಮ ಕೈಗೊಳ್ಳಲಾಗಿತ್ತು.

