ಕುಂಬಳೆ: ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ಡಿ.21 ಹಾಗೂ 22 ರಂದು ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ಶಿವಳ್ಳಿ ಬ್ರಾಹ್ಮಣ ಸಭೆಯ ವಾರ್ಷಿಕ ಕ್ರೀಡಾ-ಸಾಂಸ್ಕøತಿಕೋತ್ಸವದ ಪೂರ್ವಭಾವೀ ಸಭೆ ಇತ್ತೀಚೆಗೆ ಕುಂಬಳೆ ಆರಿಕ್ಕಾಡಿಯಲ್ಲಿರುವ ಶಿವಳ್ಳಿ ಬ್ರಾಹ್ಮಣ ಸಭೆಯ ಕಾಸರಗೋಡು ವಲಯಾಧ್ಯಕ್ಷ ಚಕ್ರಪಾಣಿ ದೇವಪೂಜಿತ್ತಾಯರ ಸ್ವಗೃಹದಲ್ಲಿ ನಡೆಯಿತು.
ಸಂಘಟನೆಯ ಪ್ರಧಾನ ಕಾರ್ಯಾಧ್ಯಕ್ಷ ಸೀತಾರಾಮ ಕಡಮಣ್ಣಾಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸಮಿತಿಯ ಎಲ್ಲ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಕಾಸರಗೋಡು ವಲಯ ಕಾರ್ಯದರ್ಶಿ ಶ್ರೀನಿವಾಸ ಕಣ್ಣರಾಯ ಸ್ವಾಗತಿಸಿ, ಸತ್ಯನಾರಾಯಣ ತಂತ್ರಿ ವಂದಿಸಿದರು.

