ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ, ವೃತ್ತಿ ಪರಿಚಯ ಮೇಳದ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ನಿರ್ಮಾಣ ಹಾಗೂ ಪ್ರದರ್ಶನ ವಿಭಾಗದ ಸ್ಪರ್ಧೆಗಳೆರಡಲ್ಲೂ ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನವನ್ನು ಗಳಿಸಿದೆ.
ಕಿರಿಯ ಪ್ರಾಥಮಿಕ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಬರೆಯುವ ಚೋಕ್ ತಯಾರಿಯಲ್ಲಿ ದಿಗಂತ್, ತಾಳೆಗರಿ ಉತ್ಪನ್ನ ತಯಾರಿಯಲ್ಲಿ ಪೃಥ್ವಿ, ಮೆಟಲ್ ಎಂಗ್ರೇವಿಂಗ್‍ನಲ್ಲಿ ಮೊಹಮ್ಮದ್ ರಫಿಲ್, ತೆಂಗಿನ ನಾರಿನ ಮೇಟ್ ತಯಾರಿಯಲ್ಲಿ ಸಫ್ರೀನ, ಕೊಡೆ ತಯಾರಿಯಲ್ಲಿ ಆಯಿಶಾತ್ ರಾಶಿದ ಎಂಬಿ ವಿಧ್ಯಾರ್ಥಿಗಳು ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಮರದ ಕೆಲಸದಲ್ಲಿ ಸಬಿತ್, ತ್ರೆಡ್ ಪ್ಯಾಟೆರ್‍ನಲ್ಲಿ ತನುಷ್ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವೂ, ನೆಟ್ ತಯಾರಿಯಲ್ಲಿ ಮುರ್ಶಿದ, ಫ್ಯಾಬ್ರಿಕ್ ಪೈಂಟಿಂಗ್‍ನಲ್ಲಿ ಆಯಿಶಾತ್ ಸಾಬೀರ ಎಂಬಿ ವಿದ್ಯಾರ್ಥಿಗಳು ಎ ಗ್ರೇಡ್, ಮೆಟೀರಿಯಲ್‍ನ ಉತ್ಪನ್ನಗಳು ಸುಭಿಕ್ಷಾ ಬಿ. ಗ್ರೇಡ್ ಪಡೆದಿದ್ದಾರೆ.
ಹಿರಿಯ ಪ್ರಾಧಮಿಕ ವಿಭಾಗದ ನಿರ್ಮಾಣ ವಿಭಾಗ : ಬರೆಯುವ ಚೋಕ್ ತಯಾರಿ ಆಕಾಶ್, ತೆಂಗಿನ ನಾರಿನ ಮೇಟ್‍ನಲ್ಲಿ ಆದಿತ್ಯ, ವೇಸ್ಟ್ ಮೆಟೀರಿಯಲ್ ಉತ್ಪನ್ನ ರಮಲ್ತ್ ತಫ್ಸಿಯ, ತ್ರೆಡ್ ಪ್ಯಾಟೆರ್ನ್‍ನಲ್ಲಿ ಫಾತಿಮತ್ ರಮಿಝ, ಮರದ ಕೆಲಸದಲ್ಲಿ ಶ್ರವನ್ ಎಂಬವರು ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ನೆಟ್ ತಯಾರಿಯಲ್ಲಿ ಆಯಿಶಾತ್ ಮುರ್ಶಿದ, ಕೊಡೆ ತಯಾರಿಯಲ್ಲಿ ಅನ್ವಿತ, ತಾಳೆಗರಿ ಉತ್ಪನ್ನ ತಯಾರಿಯಲ್ಲಿ ಫಾತಿಮತ್ ರೀಫಝ ಎ ಗ್ರೇಡ್‍ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಮೆಟಲ್ ಎನ್ ಗ್ರಾವಿಂಗ್‍ನಲ್ಲಿ ಆಯಿಶಾತ್ ಆಜ್ಸ್ಮೀನಾ ಹಾಗೂ ಫ್ಯಾಬ್ರಿಕ್ ಪೈಂಟಿಂಗ್ ಎಂಬಿ ವಿಭಾಗದಲ್ಲಿ ಎ ಗ್ರೇಡ್‍ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದ ಗಣಿತ ಮೇಳದಲ್ಲಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬಾಕ್ರಬೈಲ್ ಶಾಲೆ ದ್ವಿತೀಯ ಸ್ಥಾನವನ್ನು ಪಡೆದಿದೆ.
ಕಿರಿಯ ಪ್ರಾಥಮಿಕ ವಿಭಾಗದ ಗಣಿತ ಪಸ್ಲ್‍ನಲ್ಲಿ ಅಬ್ದುಲ್ಲಾ ಮಿಸ್ತಹ್, ಸ್ಟಿಲ್ ಮೋಡೆಲ್‍ನಲ್ಲಿ ಅಹಮದ್ ಶಮ್ಮಸ್ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಹಾಗೂ ನಂಬರ್ ಚಾರ್ಟ್‍ನಲ್ಲಿ ಸಹನಾ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನೂ, ಜಾಮೆಟ್ರಿಕ್ ಚಾರ್ಟ್‍ನಲ್ಲಿ ಸೃಜನ್ ಎಂ.ಬಿ. ಎ ಗ್ರೇಡ್ ಪಡೆದಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಂಬರ್ ಚಾರ್ಟ್‍ನಲ್ಲಿ ಮರಿಯಮತ್ ಸಫ, ಸ್ಟಿಲ್ ಮೋಡೆಲ್‍ನಲ್ಲಿ ಜಾಹ್ನವಿ ಎ ಗ್ರೇಡ್‍ನೊಂದಿಗೆ ಪ್ರಥಮ ಹಾಗೂ ಪಸ್ಲ್‍ನಲ್ಲಿ ನೌಶಾನ ಎ ಗ್ರೇಡ್‍ನೊಂದಿಗೆ ದ್ವಿತೀಯ ಮತ್ತು ಶಿಫಾನ ಜಾಸ್ಮಿನ್ ಜಾಮೆಟ್ರಿಚ್ ಚಾರ್ಟ್‍ನಲ್ಲಿ ಎ ಗ್ರೇಡ್‍ನೊಂದಿಗೆ ತೃತೀಯ ಸ್ಥಾನವನ್ನೂ, ಆಯಿಶಾತ್ ನಜಿಬಾ ಗೇಮ್ಸ್ ನಲ್ಲಿ ಎ ಗ್ರೇಡ್ ಪಡೆದಿರುತ್ತಾರೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದ ಸಮಾಜ ವಿಜ್ಞಾನದ ಕಿರಿಯ ವಿಭಾಗದ ಸ್ಟಿಲ್ ಮೋಡೆಲ್‍ನಲ್ಲಿ ಬಾಕ್ರಬೈಲ್ ಶಾಲೆಯ ರೀಫನ ಮತ್ತು ಸೈನಬತ್ ಸಹಲಾ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನೂ, ಹಿರಿಯ ಪ್ರಾಥಮಿಕ ವಿಭಾಗದ ಸ್ಟಿಲ್ ಮೋಡೆಲ್‍ನಲ್ಲಿ ವರ್ಷ ಹಾಗೂ ಮರಿಯಮತ್ ಶಲ್ವಾ ಎ ಗ್ರೇಡ್‍ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.


