ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಇಂದು(ಅ.18) ನವಾನ್ನ ಸಮರ್ಪಣೆ ಮತ್ತು ಬಲಿವಾಡು ಕೂಟ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪೂರ್ವಾಹ್ನ ಗಣಪತಿ ಹೋಮ, ಶುದ್ಧಿ ಕಲಶ, 9 ಕ್ಕೆ ವೇದ ಪಾರಾಯಣ, 10 ಕ್ಕೆ ಯಕ್ಷಗಾನ ತಾಳಮದ್ದಳೆ, ಅಪರಾಹ್ನ 12.30 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2.30 ರಿಂದ ಯಕ್ಷಗಾನ ಕೂಟ, ಸಂಜೆ 6.15 ಕ್ಕೆ ದೀಪಾರಾಧನೆ, ರಾತ್ರಿ 7.30 ಕ್ಕೆ ವಿಶೇಷ ಕಾರ್ತಿಕ ಪೂಜೆ ಜರಗಲಿದೆ.

