HEALTH TIPS

ಸಮಗ್ರ ವರದಿ-ಮಂಜೇಶ್ವರ ಉಪಚುನಾವಣೆ : ಐಕ್ಯರಂಗ ಅಭ್ಯರ್ಥಿ ಭರ್ಜರಿ ಗೆಲುವು


       ಉಪ್ಪಳ: ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ಐಕ್ಯ ರಂಗದ ಅಭ್ಯರ್ಥಿ ಎಂ.ಸಿ ಕಮರುದ್ದಿನ್ ಅವರು ಭರ್ಜರಿ ಜಯಗಳಿಸಿದರು. ಪೈವಳಿಕೆ ನಗರ ಹೈಯರ್ ಸೆಂಕಡರಿ ವಿದ್ಯಾಲಯದಲ್ಲಿ ಗುರುವಾರ ನಡೆದ ಮತ ಎಣಿಕೆಯಲ್ಲಿ  7,923 ಅಂತರದಲ್ಲಿ ಜಯಗಳಿಸಿದರು. ಎಂ.ಸಿ ಕಮರುದ್ದಿನ್ ಅವರಿಗೆ 65,407 ಮತಗಳು ಲಭಿಸಿದರೆ ನಿಕಟ ಪ್ರತಿಸ್ಪರ್ಧಿ ಎನ್.ಡಿ.ಎ. ಅಭ್ಯರ್ಥಿ ಕುಂಟಾರು ರವೀಶ್ ತಂತ್ರಿ ಅವರಿಗೆ  57,484 ಮತಗಳು ಲಭಿಸಿತು. ಎಡರಂಗದ ಅಭ್ಯರ್ಥಿ ಎಂ.ಶಂಕರ್ ರೈ ಅವರಿಗೆ 38,233 ಮತಗಳು ಲಭಿಸಿತು. ಸ್ವತಂತ್ರ ಅಭ್ಯರ್ಥಿಗಳಾದ ಗೋವಿಂದನ್ ಅವರಿಗೆ 337, ಜಾನ್ ಡಿ'ಸೋಜಾ ಅವರಿಗೆ 277, ರಾಜೇಶ್ ಅವರಿಗೆ 232, ಕಮರುದ್ದನ್ ಎಂ.ಸಿ. ಅವರಿಗೆ 211 ಮತಗಳು ದೊರೆತವು. 574 ನೋಟ ಮತಗಳು ಚಲಾವಣೆಗೊಂಡು ಒಂದು ಮತ ಅಸಿಂಧುಗೊಂಡಿತು.
     ಒಟ್ಟು  199 ಮತದಾನ ಕೇಂದ್ರಗಳಲ್ಲಿ  ಅ.21 ರಂದು ಮತದಾನ ನಡೆದಿತ್ತು. ಕಳೆದ 2016ರಲ್ಲಿ ಗೆದ್ದ ಶಾಸಕ ಪಿ.ಬಿ.ಅಬ್ದುಲ್ ರಝಖ್ ಅವರ ನಿಧನದಿಂದ ಕ್ಷೇತ್ರ ತೆರವಾಗಿದ್ದು  ಉಪಚುನಾವಣೆ ನಡೆದಿದೆ. ಐಕ್ಯ ರಂಗದ ಅಭ್ಯರ್ಥಿ ಗೆಲುವಿನ ಸಂತಸದಲ್ಲಿ  ಕಾರ್ಯಕರ್ತರು ಕ್ಷೇತ್ರದಾದ್ಯಂತ ಮೆರವಣಿಗೆ ನಡೆಸಿ ಸಿಡಿಮದ್ದು ಪ್ರದರ್ಶಿಸಿ, ಸಿಹಿ ಹಂಚಿ ವಿತರಿಸಿ ಸಂಭ್ರಮ ಆಚರಿಸಿದರು.
    ಆರಂಭದಿಂದಲೇ ಮುನ್ನಡೆ ಸಾಧಿಸಿದ ಎಂ.ಸಿ.ಖಮರುದ್ದೀನ್ ಅಂತಿಮ ಹಂತದ ವರೆಗೂ ಮುನ್ನಡೆ ಕಾಯ್ದುಕೊಂಡರು. ಒಂದೊಂದು ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮುನ್ನಣೆ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಉತ್ಸುಕರಾಗಿ ಜಯಕಾರ ಮೊಳಗಿದರು.
      ದ್ವಿತೀಯ ಸ್ಥಾನ ಕಾಯ್ದುಕೊಂಡ ಬಿಜೆಪಿ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 2016 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದ್ವಿತೀಯ ಸ್ಥಾನದಲ್ಲಿತ್ತು. ಈ ಬಾರಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಈ ಹಿಂದಿನಂತೆ ದ್ವಿತೀಯ ಸ್ಥಾನ ಉಳಿಸಿಕೊಂಡಿದ್ದಾರೆ.
        ಮತ ಎಣಿಕೆ : ಮತ ಎಣಿಕೆಯ ಪ್ರಕ್ರಿಯೆ 12 ಮೇಜುಗಳಲ್ಲಿ ನಡೆಯಿತು. ಜಿಲ್ಲಾಧಿಕಾರಿ ಇಡೀ ಪ್ರಕ್ರಿಯೆಯನ್ನು ನಿಯಂತ್ರಿಸಿದರು. ಮೊದಲ 5 ಮತಯಂತ್ರಗಳ ಮತಗಳನ್ನು ಎಣಿಸಲಾಯಿತು. ಇದರೊಂದಿಗೆ ಯಂತ್ರದ ಜೊತೆಗಿರುವ ವಿವಿಪಾಟ್‍ಗಳ ಸ್ಲಿಪ್‍ಗಳನ್ನೂ ಗಣನೆ ಮಾಡಲಾಯಿತು. ಚೀಟಿ ಎತ್ತುವ ಮೂಲಕ ಈ ಮತಯಂತ್ರಗಳನ್ನು ಆರಿಸಲಾಯಿತು. ನಂತರ ಒಂದನೇ ನಂಬ್ರ ಮತಗಟ್ಟೆಯಿಂದ 198ನೇ ನಂಬ್ರ ಬೂತ್ ವರೆಗಿನ ಕ್ರಮದಲ್ಲಿ ಮತಗಣನೆ ನಡೆಯಿತು. ಮತಗಣನೆ ಕೇಂದ್ರದಲ್ಲಿ ಚುನಾವಣಾ ಅಧಿಕಾರಿ, ಉಪಚುನಾವಣಾ ಅಧಿಕಾರಿ, ಸಾರ್ವಜನಿಕ ನಿರೀಕ್ಷಕಿ ಇದ್ದರು.
      ಪ್ರತಿ ಸುತ್ತು ಪೂರ್ತಿಗೊಂಡ ವೇಳೆ ಚುನಾವಣಾ ಅಧಿಕಾರಿ ಅವರ ಅಂಗೀಕಾರದೊಂದಿಗೆ ಡಾಟಾ ಎಂಟ್ರಿ ನಡೆಸಲಾಯಿತು. ಸಾರ್ವಜನಿಕರು ಯಥಾಸಮಯ ಫಲಿತಾಂಶ ತಿಳಿಯುವ ನಿಟ್ಟಿನಲ್ಲಿ ಸೌಲಭ್ಯ ಏರ್ಪಡಿಸಲಾಗಿತ್ತು.
      ಪೆÇಲೀಸ್ ಬಿಗಿ ಭದ್ರತೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತಗಣನೆ ಹಿನ್ನೆಲೆಯಲ್ಲಿ ಪೈವಳಿಕೆ ನಗರ ಸರ್ಕಾರಿ ಹೈಯರ್ ಶಾಲೆ ಸಹಿತ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕಾಸರಗೋಡು ಪೆÇಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರಬಲ ಪೆÇಲೀಸ್ ಸುಪರ್ದಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಜಿಲ್ಲಾ ಮಟ್ಟದ ಪೆÇಲೀಸರಲ್ಲದೆ ಇಂಡಿಯನ್ ರಿಸರ್ವ್, ಆಮ್ರ್ಡ್ ಬೆಟಾಲಿಯನ್‍ಗಳಿಂದ 4 ತುಕಡಿ ಪೆÇಲೀಸರನ್ನು ಕರೆಸಿ ಕರ್ತವ್ಯಕ್ಕೆ ನೆಮಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries