HEALTH TIPS

ಯುಡಿಎಫ್ ನ ಅಭೂತಪೂರ್ವ ಗೆಲುವು-ಎನ್ ಡಿ ಎ-ಎಲ್ ಡಿ ಎಫ್ ಗಳ ತಲೆ ಕೆಳಗಾದ ಲೆಕ್ಕಾಚಾರ


       ಮಂಜೇಶ್ವರ: ಭಾರೀ ಕುತೂಹಲ ಮೂಡಿಸಿದ್ದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಗುರುವಾರ ಮಧ್ಯಾಹ್ನ ಹೊರ ಬೀಳುತ್ತಿರುವಂತೆ ಆಶ್ಚರ್ಯಕರವಾದ ಮತ ಚಲಾವಣೆ ಜನರನ್ನು ಚಕಿತಗೊಳಿಸಿತು.
    ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ 89 ಮತಗಳ ಪುಟ್ಟ ಅಂತರದಿಂದ ಯುಡಿಎಫ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದ ದಿ.ಪಿ.ಬಿ.ಅಬ್ದುಲ್ ರಸಾಕ್ ಅವರ ನಿಧನದ ಕಾರಣ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಸಿ.ಖಮರುದ್ದೀನ್ 7923 ಭಾರೀ ಅಂತರದ ಮತಗಳಿಂದ ಜಯಗಳಿಸಿರುವುದು ಆಶ್ಚರ್ಯಕ್ಕೆಡೆಯಾಗಿದೆ.
     ಪೈವಳಿಕೆ ನಗರ ಸರ್ಕಾರಿ ಫ್ರೌಢಶಾಲಾ ಆವರಣದಲ್ಲಿ ಗುರುವಾರ ಬೆಳಿಗ್ಗೆ ಮತ ಎಣಿಕೆ ಆರಂಭಗೊಳ್ಳುತ್ತಿರುವಂತೆ ಏಂ.ಸಿ.ಖಮರುದ್ದೀನ್ ಗಳಿಸಿದ ಮತ ಗಳಿಕೆಯ ನೆಗೆತವನ್ನು ಕೊನೆಯವರೆಗೂ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಮತ ಎಣಿಕೆ ಕೊನೆಗೊಂಡಾಗ ಖಮರುದ್ದೀನ್ ಅವರು 65,407 ಮತಗಳಿಂದ ಮುನ್ನೆಲೆಯಲ್ಲಿ ಜಯಗಳಿಸಿದರು. ಎನ್ ಡಿ ಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರಿಗೆ 57, 484 ಮತಗಳು ಲಭ್ಯವಾದವು. ಎಲ್‍ಡಿಎಫ್ ಅಭ್ಯರ್ಥಿ ಎಂ.ಶಂಕರ ರೈ ಮಾಸ್ತರ್ 38, 233 ಮತಗಳಿಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
   ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ 56,870 ಮತಗಳನ್ನು ಗಳಿಸಿಕೊಂಡಿತ್ತು. ಈ ಬಾರಿ 8, 537 ಅಧಿಕ ಮತಗಳನ್ನು ಖಮರುದ್ದೀನ್ ಗಳಿಸಿ ಭಾರೀ ಬಹುಮತದಿಂದ ಗೆಲ್ಲುವಲ್ಲಿ ಸಾಧ್ಯವಾಯಿತು. ಎನ್ ಡಿ ಎ ಅಭ್ಯರ್ಥಿಯಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ಅವರು 56781 ಮತಗಳಿಸಿದ್ದರು. ಈ ಲೆಕ್ಕಾಚಾರದಂತೆ ಈ ಬಾರಿ ಎನ್ ಡಿ ಎಯು ಹೆಚ್ಚುವರಿಯಾಗಿ 703 ಮತಗಳನ್ನು ಗಳಿಸುವಲ್ಲಿ ಸಫಲವಾಗಿದ್ದು, ಉದ್ದೇಶಿತ ಗುರಿ ತಲಪಿಲ್ಲ. ಇದೇ ವೇಳೆ ನಿರ್ಣಾಯಕವಾಗಿದ್ದ ಎಲ್ ಡಿ ಎಫ್ ಮತದಲ್ಲಿ ಭಾರೀ ಮೊತ್ತದ ಬದಲಾವಣೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕಳೆದ ಬಾರಿ ಎಲ್ ಡಿ ಎಫ್ 42, 565 ಮತಗಳನ್ನು ಗಳಿಸಿತ್ತು. ಆದರೆ ಎಲ್ ಡಿ ಎಫ್ ಗೆ ಈ ಉಪ ಚುನಾವಣೆಯಲ್ಲಿ 4,332 ಮತಗಳ ಕುಸಿತ ಉಂಟಾಗಿ 38, 233 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಡಲು ಕಾರಣವಾಯಿತು.
    ಉಪ ಚುನಾವಣೆಯ ಬಳಿಕ ನಡೆದ ಮತ ಚಲಾವಣಾ ಲೆಕ್ಕಾಚಾರದಂತೆ ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ಎಣ್ಮಕಜೆ ಗ್ರಾ.ಪಂ. ಪಡ್ರೆ ಮತಗಟ್ಟೆಯಲ್ಲಿ ಅತ್ಯಧಿಕ ಪ್ರಮಾಣದ ಮತ ಚಲಾವಣೆ ನಡೆದಿರುವುದು ಎನ್ ಡಿ ಎ ಗೆಲುವಿನ ಸಾಧ್ಯತೆಯನ್ನು ಎತ್ತಿಹಿಡಿದಿತ್ತು. ಆದರೆ ಎಲ್ಲ ಲೆಕ್ಕಾಚಾರಗಳು ಕೈತಪ್ಪಿ ಈ ಬಾರಿಯೂ ಎನ್ ಡಿ ಎ ಎರಡನೇ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. ಜೊತೆಗೆ ದಶಕಗಳ ಹಿಂದೆ ಎಡರಂಗದ ಪಾಲಾಗಿದ್ದ ಮಂಜೇಶ್ವರ ಮಂಡಲವನ್ನು ಮತ್ತೆ ಪಡೆಯುವ ಆಸಕ್ತಿಯಿಂದ ವ್ಯಾಪಕ ಪ್ರಚಾರದ ಮೂಲಕ ಎಂ.ಶಂಕರ ರೈ ಮಾಸ್ತರ್ ವಿಶ್ವಾಸದಲ್ಲಿದ್ದರು. ಉಪ ಚುನಾವಣೆಯ ಬಳಿಕ ಅದು ಎರಡನೇ ಸ್ಥಾನ ಮಾತ್ರ ಲಭ್ಯವಾದಿತೆಂದು ಪಕ್ಷ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಮತ್ತೆ ಮೂರನೇ ಸ್ಥಾನವನ್ನೇ ಕಾಯ್ದುಕೊಳ್ಳಲು ಸಾಧ್ಯವಾಗಿರುವುದು ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದಂತಾಗಿದೆ.
ಚಿತ್ರಗಳು:ಅಖಿಲೇಶ್ ನಗುಮುಗಂ-ಪೋಕ್ಸ್ ಸ್ಟಾರ್ ಬದಿಯಡ್ಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries