HEALTH TIPS

ಕೇರಳ ಉಪ ಚುನಾವಣೆ: ಐದು ಕ್ಷೇತ್ರಗಳ ಪೈಕಿ 3ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಭೇರಿ!


      ತಿರುವನಂತಪುರ: ಕೇರಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಮಿಕ್ಕುಳಿದ ಎರಡು ಕ್ಷೇತ್ರಗಳನ್ನು  ಆಡಳಿತರೂಢ ಎಲ್‍ಡಿಎಫ್  ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
      ಸಿಪಿಎಂ ನೇತೃತ್ವದ ಎಡರಂಗ ಯುಡಿಎಫ್ ನಿಂದ ಒಂದು ಕ್ಷೇತ್ರವನ್ನು ಕಸಿದುಕೊಂಡಿದ್ದು,  ತನ್ನ ಸದಸ್ಯ ಬಲವನ್ನು 93ಕ್ಕೆ ಏರಿಸಿಕೊಂಡಿದೆ. ಯುಡಿಎಫ್ ಸದಸ್ಯ ಬಲ 47ರಿಂದ 45 ಕ್ಕೆ ಇಳಿದಿದೆ. 
       2016ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದ ಕೊನ್ನಿ, ವೆಟ್ಟಿಯೂರ್ ಕಾವು ಕ್ಷೇತ್ರ ಈ ಬಾರಿ ಎಲ್‍ಡಿಎಫ್ ಪಾಲಾಗಿದೆ. ಸಿಪಿಎಂ ವೆಟ್ಟಿಯೂರು ಕಾವು ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
     ಮೂವರು ಕಾಂಗ್ರೆಸ್ ಹಾಗೂ ಒಬ್ಬರು ಸಿಪಿಎಂ ಅಭ್ಯರ್ಥಿಗಳು ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಹಾಗೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್ ಮೃತಪಟ್ಟಿದ್ದರಿಂದ ಅ. 21 ರಂದು ಈ ಕ್ಷೇತ್ರಗಳಲ್ಲಿ  ಉಪ ಚುನಾವಣೆ ನಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries