HEALTH TIPS

ಕ್ರಿಯೆಟಿವ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

   
     ಬದಿಯಡ್ಕ: ಉಪ್ಪಂಗಳ ಟ್ರಸ್ಟ್ ನೇತೃತ್ವದಲ್ಲಿ ಬದಿಯಡ್ಕದ ಕ್ರಿಯೆಟಿವ್ ಆಟ್ರ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ನೀಲಾಂಬರಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಪುಂಡೂರು ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ರೆಡ್‍ಕ್ರಾಸ್ ಸಂಸ್ಥೆಯ ರಕ್ತನಿಧಿ ವಿಭಾಗದ ಸಹಯೋಗದೊಂದಿಗೆ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.
    ಮುಳ್ಳೇರಿಯದ ವೈದ್ಯ ಡಾ.ಗೋವಿಂದ ಕೃಷ್ಣ ರಕ್ತದಾನ ಶಿಬಿರ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ನಿರಂತರ ರಕ್ತದಾನ ಸುರಕ್ಷಿತ ಆರೋಗ್ಯಕ್ಕೆ ಉತ್ತಮ ಎಂದು ತಿಳಿಸಿದರು.
   ಕ್ರಿಯೆಟಿವ್ ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮಾ ಉಪ್ಪಂಗಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪ್ಪಂಗಳ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವುಉದ ಸ್ತುತ್ಯರ್ಹ. ಕೃತಕವಾಗಿ ಈವರೆಗೆ ಬದಲಿ ವ್ಯವಸ್ಥೆಬ ಇಲ್ಲದ ರಕ್ತ ಅಮೂಲ್ಯವಾದುದುದಾಗಿದ್ದು, ರಕ್ತದಾನ ಮಹತ್ವದ್ದೆನಿಸಿದೆ. ರಕ್ತದಾನದ ಬಗೆಗಿರುವ ತಪ್ಪುಗ್ರಹಿಕೆಗಳನ್ನು ನಿಯಂತ್ರಿಸಿ ಜಾಗೃತಿಯ ಮೂಲಕ ರಕ್ತದಾನಿಗಳ ಸಂಖ್ಯೆಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.
    ದಕ್ಷಿಣ ಕನ್ನಡ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ, ನಿವೃತ್ತ ಆದಾಯ ತೆರಿಗೆ ಇಲಾಖಾ ಅಧಿಕಾರಿ ಪ್ರಭಾಕರ ಶರ್ಮಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರೆಡ್‍ಕ್ರಾಸ್ ಅಧಿಕಾರಿ ಪ್ರವೀಣ್, ನೀಲಾಂಬರಿ ಸಂಸ್ಥೆಯ ಅಧ್ಯಕ್ಷ ಸುಧೀಶ್, ಕರ್ಹಾಡ ಬ್ರಾಹ್ಮಣ ಸಮಾಜ ಅಗಲ್ಪಾಡಿ ಘಟಕಾಧ್ಯಕ್ಷ ಗಣೇಶ್ ಚೇರ್ಕೂಡ್ಲು, ಕ್ರಿಯೆಟಿವ್ ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್. ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ಯಾರ್ಥಿನಿ ಮಧುಶ್ರೀ ಪ್ರಾರ್ಥಿಸಿದರು. ಪ್ರಾಧ್ಯಾಪಕ ಪ್ರಕಾಶ್ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಸತೀಶ್ ವಂದಿಸಿದರು. ಪ್ರಾಧ್ಯಾಪಿಕೆ ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries