ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳಿಗಾಗಿ ವಿವಿಧ ಬಯಲು ಪ್ರದೇಶಗಳಿಂದ ಹಸಿಹುಲ್ಲನ್ನು ಕತ್ತರಿಸುವ ಕಾರ್ಯಕ್ರಮ ಗೋಪ್ರೇಮಿಗಳು ಒಂದುಗೂಡಿ ಮತ್ತೆ ಆರಂಭಿಸಿದರು. ಕಳೆದ ವರ್ಷ ಮಳೆಗಾಲದ ನಂತರ ಅನೇಕ ಕಡೆಗಳಿಂದ ಹಸಿಹುಲ್ಲನ್ನು ಕತ್ತರಿಸಿದ ಕಾರ್ಯಕರ್ತರು ಮತ್ತೆ ಭಾನುವಾರ ಒಂದುಗೂಡಿ ಕಾಸರಗೋಡು ವಿದ್ಯಾನಗರದ ಅಂಧ ವಿದ್ಯಾರ್ಥಿಗಳ ಶಾಲೆಯ ಮುಂಭಾಗದಲ್ಲಿ ಮಹಾತ್ಮಾಗಾಂಧಿ ಕಾಲೊನಿಯ ವಿಶಾಲ ಪ್ರದೇಶದಿಂದ ಹಸಿಹುಲ್ಲನ್ನು ಕತ್ತರಿಸಲಾಯಿತು. ಮುಳ್ಳೇರಿಯ ಹವ್ಯಕ ಮಂಡಲದ ಕಾಸರಗೋಡು ವಲಯ ಅಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವವನ್ನು ವಹಿಸಿದ್ದರು. ಬದಿಯಡ್ಕದ ಪಶುವೈದ್ಯ ಡಾ. ವೈ.ವಿ.ಕೃಷ್ಣಮೂರ್ತಿ ಹಾಗೂ ಕಿರಣಾ ದಂಪತಿಗಳು ಪುತ್ರ ಅಶ್ವಿನಿರಮಣನ ಜನ್ಮದಿನದ ಪ್ರಯುಕ್ತ ಹುಲ್ಲಿನ ಸಾಗಾಟದ ವೆಚ್ಚವನ್ನು ಭರಿಸುವ ಮೂಲಕ ಜನ್ಮದಿನವನ್ನು ಆಚರಿಸಿ ಮಾದರಿಯಾದರು. ಕಳೆದ ವರ್ಷ ಗೋಪ್ರೇಮಿಗಳಿಂದ ಪ್ರಾರಂಭವಾದ ಈ ಕಾಯಕವು ನಾಡಿನಾದ್ಯಂತ ಪಸರಿಸಿದೆ. ಬೆಂಗಳೂರು ನಿವಾಸಿ, ಮಹಾಮಂಡಲ ಶಾಸನ ತಂತ್ರದ ಆಡಳಿತ ಖಂಡದ ಅಂತರ್ಜಾಲ ವಿಭಾಗದ ಸಹಕಾರ್ಯದರ್ಶಿ ಅಂಬಿಕಾ ವೆಂಕಟೇಶ ದಂಪತಿಗಳು ಈ ಸಂದರ್ಭದಲ್ಲಿ ಜೊತೆಗೂಡಿದರು. ಕಳೆದ ವರ್ಷದ ಮೇವಿನ ಸೇವೆಯ ವಿವರ ತಿಳಿದಿದ್ದ ದಂಪತಿಗಳು ನಮಗೂ ಈ ರೀತಿ ಸೇವೆ ಮಾಡಬೇಕೆಂಬ ಭಾವನೆಯಿಂದ ಹುಲ್ಲು ಕಟಾವು ಮಾಡುವ ಜಾಗಕ್ಕೆ ಬಂದು, ಕಾರ್ಯಕರ್ತರ ಶ್ರಮ ನೋಡಿ, ತಾವೂ ಜೊತೆಗೂಡಿದರು. ಇಷ್ಟಕ್ಕೇ ತೃಪ್ತಿ ಆಗದ ದಂಪತಿಗಳು ಮುಂದಿನ ಹುಲ್ಲುಸಾಗಾಟದ ವೆಚ್ಚಕ್ಕೆ ಎರಡುಸಾವಿರ ದೇಣಿಗೆಯನ್ನೂ ಸಮರ್ಪಣೆ ಮಾಡಿದರು.
ಮಾತೃತ್ವಮ್ ಪಧಾನೆ ಈಶ್ವರಿ ಶ್ಯಾಮ್ ಭಟ್, ಶಾಮ ಭಟ್ ಬೇರ್ಕಡವು, ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಿಂಧು-ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಕಾಸರಗೋಡು ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್, ಉಪಾಧ್ಯಕ್ಷ ಬಿ.ಮಹಾಬಲ ಭಟ್, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಕೋಶಾಧಿಕಾರಿ ರಮೇಶ ಭಟ್, ಗುರಿಕ್ಕಾರಾದ ತೆಕ್ಕೇಕರೆ ಶಂಕರನಾರಾಯಣ ಭಟ್, ಮಾತೃಪ್ರಧಾನೆ ಪ್ರೇಮಲತಾ ಸಿ ಭಟ್, ಸವಿತಾ ಯಸ್.ಯನ್.ಭಟ್, ಸವಿತಾ ಆರ್. ಭಟ್, ವೈ.ಕೆ.ಗೋವಿಂದ ಭಟ್, ಈಶ್ವರಚಂದ್ರ ಟಿ, ಪ್ರೇಮ್ ಪ್ರಕಾಶ, ಯಸ್.ಯನ್.ಪ್ರಸಾದ, ಗೋಶಾಲೆ ಕಾರ್ಯದರ್ಶಿ ಶ್ರೀಧರ ಭಟ್, ಕಿರಣಶಂಕರ, ಶ್ರೀರಾಮ ಶರ್ಮ ಎಡಕ್ಕಾನ ಜೊತೆಗಿದ್ದು ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು. ಕಾಸರಗೋಡು ಸೇವಾ ಪಧಾನ ಮುರಳಿ ಮೊಗ್ರಲ್ ಯಂತ್ರದ ಮೂಲಕ ಹುಲ್ಲು ಕಟಾವು ಮಾಡಿ ಸಹಕರಿಸಿದರು. ಹವ್ಯಕಸೇವಾ ಭಾರತೀ ಟ್ರಸ್ಟ್‍ನ ಡಾ.ವೆಂಕಟಗಿರಿ ಸ್ಥಳಕ್ಕೆ ಭೇಟಿನೀಡಿ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


