ಕುಂಬಳೆ: ಅಖಿಲ ಭಾರತ ಕೋಟೆಯವರ ಸಂಘದ ವತಿಯಿಂದ 28 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂಬಳೆ ಆರಿಕ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ದಾಮೋದರ ಸೂರ್ಲು ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಅವರು ಉದ್ಘಾಟಿಸಿದರು. ಕೆ.ಎನ್. ಗೋಪಾಲಕೃಷ್ಣ, ನಾಗರಾಜ ಮಧೂರು, ಪುರುಷೋತ್ತಮ ಮೈಸೂರು, ಲಕ್ಷ್ಮೀ ಪಾರೆಕಟ್ಟೆ, ಡಾ.ರಾಜೇಂದ್ರ, ಜಯಂತಿ ಮೊದಲಾದವರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ತಾರಾನಾಥ ಮಧೂರು ಸ್ವಾಗತಿಸಿ, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶಾಲಿನಿ ತಾರಾನಾಥ ವಂದಿಸಿದರು.


