ನವದೆಹಲಿ: ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದಲ್ಲಿ ಟ್ವೀಟ್ ಮಾಡುವ ಮೂಲಕ ಲೇಡಿಗಾಗಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಲೇಡಿ ಗಾಗಾ ಸಂಸ್ಕೃತದಲ್ಲಿ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಆಂಗ್ಲದಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಪ್ರಪಂಚದಲ್ಲಿರುವ ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸಲಿ ಎಂಬುದಾಗಿದೆ. ಲೇಡಿಗಾಗಾ ಮಾಡಿರುವ ಈ ಟ್ವೀಟ್ ನ ಅರ್ಥ ತಿಳಿಯದ ಅವರ ಸಹಸ್ರಾರು ಅಭಿಮಾನಿಗಳು, ಇದು ಅವರ ಹೊಸ ಆಲ್ಬಂ ಹೆಸರೇ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದರ ಅರ್ಥ ಹುಡುಕಾಟಕ್ಕೆ ಟ್ರಾನ್ಸ್ ಲೇಟರ್ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ.
ಆದರೆ ಭಾರತದ ಅವರ ಅಭಿಮಾನಿಗಳು ಮಾತ್ರ ಈ ಟ್ವೀಟ್ ಗೆ ಹರ್ಷ ವ್ಯಕ್ತಪಡಿಸಿದ್ದು, ವಿದೇಶಿಯರು ಸಂಸ್ಕೃತ ಕಲಿಯುತ್ತಿರುವುದು, ವೇದಗಳನ್ನು ಪಠಿಸುವುದು ಖುಷಿ ತಂದಿದೆ ಎಂದಿದ್ದಾರೆ.


