ಲಡಾ ಕ್: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್ ಪ್ರದೇಶವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಈ ವಿಷಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಲಡಾಕ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಿಯಾಚಿನ್ ಗ್ಲೇಸಿಯರ್ ಪ್ರದೇಶ 1984ರ ಆಪರೇಷನ್ ಮೇಘದೂತ್ ಕಾರ್ಯಾಚರಣೆ ಬಳಿಕ ಭಾರತೀಯ ಸೇನೆಯ ನಿಯಂತ್ರಣಕ್ಕೆ ಬಂದಿತ್ತು. ಇದು ಆಯಕಟ್ಟಿನ ಪ್ರದೇಶವಾಗಿದ್ದು, ಈಗ ಇಲ್ಲಿನ ಬೇಸ್? ಕ್ಯಾಂಪ್ ನಿಂದ ಕುಮಾರ್ ಪೋಸ್ಟ್ ತನಕದ ಪ್ರದೇಶವನ್ನು ಪ್ರವಾಸೋದ್ಯಮದ ಉದ್ದೇಶಕ್ಕೆ ತೆರವುಗೊಳಿಸಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರವಾಸೋದ್ಯಮ ವಿಚಾರದಲ್ಲಿ ಲಡಾಕ್?ಗೆ ಭಾರಿ ಭವಿಷ್ಯ ಇದೆ. ಉತ್ತಮ ಸಂಪರ್ಕ ಮೂಲಸೌಕರ್ಯ ಲಡಾಕ್ ಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಈಗ ಸಿಯಾಚಿನ್ ಪ್ರದೇಶ ಕೂಡ ಪ್ರವಾಸಿಗರಿಗೆ ಮುಕ್ತವಾಗಿದೆ. ವಿಶೇಷವಾಗಿ ಸಿಯಾಚಿನ್ ನಿಂದ ಕುಮಾರ್ ಪೋಸ್ಟ್ ತನಕದ ಪ್ರದೇಶ ಎಂದು ಹೇಳಿದ್ದಾರೆ.


