ನವದೆಹಲಿ: ಭಾರತದ ಸಂಶೋಧಕರೊಬ್ಬರು ಇಸ್ರೇಲ್ ನಲ್ಲಿ ಅತ್ಯುತ್ತಮವಾದ ಟೆಲಿಸ್ಕೋಪ್ ವ್ಯವಸ್ಥೆ(ಹಾಲಿನ ಡಬ್ಬದ ಗಾತ್ರದ ನ್ಯಾನೋ ಉಪಗ್ರಹದೊಂದಿಗೆ ಹೈ ರೆಸಲ್ಯೂಷನ್ ಇಮೇಜ್ ಚಿತ್ರೀಕರಿಸಬಲ್ಲ ಕ್ಯಾಮರಾವನ್ನೂ ಜೋಡಿಸಿರುವ ವ್ಯವಸ್ಥೆ )ಯನ್ನು ಅಭಿವೃದ್ಧಿಪಡಿಸಿ ಜಗತ್ತಿನ ಗಮನಸೆಳೆದಿದ್ದಾರೆ.
ಬಾಹ್ಯಾಕಾಶ ಮತ್ತು ಭೂಮಿ ಮೂಲದ ಟೆಲಿಸ್ಕೋಪ್ ಗಳು ಬಹುತೇಕ ಸಂದರ್ಭಗಳಲ್ಲಿ ಆಪ್ಟಿಕಲ್ ಸಿಸ್ಟಮ್ ನ ಫಿನಿಟ್ ಅಪರ್ಚರ್ ಹೊಂದಿರುತ್ತವೆ. ಹೊಸ ಟೆಕ್ನಾಲಜಿಯು ಆರ್ಥಿಕವಾಗಿ ಮತ್ತು ಬಾಹ್ಯಾಕಾಶದಿಂದ ಫೊಟೊ ತೆಗೆಯಬಲ್ಲ ಕ್ಯಾಮರಾ ಮತ್ತು ಭೂಮಿಯಿಂದ ಬಾಹ್ಯಾಕಾಶ ಗಮನಿಬಲ್ಲ ಟೆಲಿಸ್ಕೋಪ್ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ಕ್ರಾಂತಿಯನ್ನೆ ಸೃಷ್ಟಿಸಲಿದೆ ಎಂಬುದು ಬೆನ್ ಗುರಿಯನ್ ಯೂನಿವರ್ಸಿಟಿಯ ಪಿ ಎಚ್ ಡಿ ವಿದ್ಯಾರ್ಥಿ ಸಂಶೋಧಕ ಅಂಗಿಕಾ ಬುಲ್ ಬುಲ್ ಅಭಿಮತ.
ಬಾಹ್ಯಾಕಾಶ ಸಂಶೋಧನೆ, ಖಗೋಳಶಾಸ್ತ್ರ, ಏರಿಯಲ್ ಫೊಟೊಗ್ರಫಿ ಮತ್ತು ಸಂಬಂಧಿತ ಕ್ಷೇತ್ರದ ಮೇಲೆ ಈ ಸಂಶೋಧನೆ ಭಾರಿ ಪರಿಣಾಮ ಬೀರಲಿದ್ದು, ಸಾಕಷ್ಟು ಬದಲಾವಣೆ ತರಲಿದೆ. ನಮ್ಮ ಟೆಲಿಸ್ಕೋಪಿಕ್ ವ್ಯವಸ್ಥೆಗೆ ಸದ್ಯ ಬೇಕಾಗಿರುವ ಜಾಘದ ಶೇಕಡ 0.5 ಸ್ಥಳ ಮಾತ್ರ ಈ ಹೊಸ ಟೆಕ್ನಾಲಜಿ ಅಳವಡಿಸಲು ಸಾಕು ಎನ್ನುತ್ತಾರೆ ಅಂಗಿಕಾ.
ಅಂಗಿಕಾ ಬುಲ್ ಬುಲ್ ಬಿಹಾರದ ಭಾಗಲ್ ಪುರದವರು. ಅವರ ಈ ಸಂಶೋಧನಾ ಪ್ರಬಂಧ ಜರ್ನಲ್ ಆಪ್ಟಿಕಾದಲ್ಲಿ ಪ್ರಕಟವಾಗಿ ಬಾಹ್ಯಾಕಾಶ ಕ್ಷೇತ್ರದ ಗಮನಸೆಳೆದಿದೆ.


