ಕಾಸರಗೋಡು: ಅ.25ರಿಂದ 30 ವರೆಗೆ ಕೊಳತ್ತೂರು ಸರಕರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಕಾಸರಗೋಡು ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಹಸುರು ಸಂಹಿತೆ ಜಾರಿಗೊಳಿಸುವ ಬೃಹತ್ ಚಟುವಟಿಕೆಗಳು ಆರಂಭಗೊಂಡಿವೆ.
ಫ್ಲೆಕ್ಸ್,ಪ್ಲಾಸ್ಟಿಕ್ಬ್ಯಾಡ್ಜ್ ಇತ್ಯಾದಿಗಳನ್ನು ಪೂರ್ಣ ರೂಪದಲ್ಲಿ ಕೈಬಿಟ್ಟು ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಯ ಮೂಲಕ ಈ ಬಾರಿಯ ಕಲೋತ್ಸವ ನಡೆಯಲಿದೆ. ಈ ನಿಟ್ಟಿನಲ್ಲಿ ಸ್ಪರ್ಧೆಗಳ ಅಂಕಕಾರಿಗೆ, ಕರ್ತವ್ಯದ ಸಿಬ್ಬಂದಿಗೆ ಮೊದಲಾದವರಿಗೆ ಕಾಗದದ ಪೆನ್ ವಿತರಿಸಲಾಗುವುದು.
ಇದರ ಮೊದಲ ಹಂತವಾಗಿ ತ್ಯಾಜ್ಯ ನಿವಾರಣೆ ಸಂಬಂಧ ತೆಂಗಿನಗರಿಯ ಕಸದ ತೊಟ್ಟಿ ತಯಾರಿಸುವ ತರಬೇತಿ ಕೊಳತ್ತೂರು ಶಾಲೆಯಲ್ಲಿ ನಡೆಯಿತು. ಬೇಡಡ್ಕ ಗ್ರಾಮಪಂಚಾಯತ್ ನ ಹರಿತಸೇನೆ ಮತ್ತು ಶಾಲೆಯ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಶಿವಕುಮಾರ್ ಕೊಡಕ್ಕಾಡ್ ಪ್ರಧಾನ ತರಬೇತುದಾರರಾಗಿದ್ದರು. ಹರಿತ ಕೇರಳಂಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಕೊಳತ್ತೂರು ಶಾಲೆಯ ಮುಖ್ಯ ಶಿಕ್ಷಕ ಎ.ಭಾಸ್ಕರನ್, ಅಶೋಕನ್, ರಾಧಾಕೃಷ್ಣನ್ ಚಾಳಕ್ಕಾಡ್, ಕೃಷ್ಣನ್, ಲೋಹಿತಾಕ್ಷನ್ ಪೆರಿಂಗಾನಂ, ಪುರುಷೋತ್ತಮನ್ ಕುಟ್ಟಿಪ್ಪಾರ. ಶ್ರೀಜಾ ಮೊದಲಾದವರು ತರಬೇತಿಗೆ ನೇತೃತ್ವ ವಹಿಸಿದ್ದರು.


