HEALTH TIPS

717 ವರ್ಷಗಳ ಬಳಿಕ ನಡೆಯುತ್ತಿದೆ ಕಲ್ಯೋಟ್ ಪೆರುಂಕಳಿಯಾಟ ಮಹೋತ್ಸವ-ಡಿ.23 ರಿಂದ 29ರವರೆಗೆ ಸಾಕ್ಷಿಯಾಗಲಿದೆ ಐತಿಹಾಸಿಕತೆಗೆ


     ಮುಳ್ಳೇರಿಯ: ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಕಲ್ಯೋಟ್ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. 717 ವರ್ಷಗಳ ಬಳಿಕ ಕಲ್ಯೋಟ್ ಶ್ರೀ  ಭಗವತಿ ಕ್ಷೇತ್ರ ಕಳಗಂನಲ್ಲಿ ಪೆರುಂಕಳಿಯಾಟ ಮಹೋತ್ಸವ ನಡೆಯಲಿದೆ.   ಡಿಸೆಂಬರ್ 23ರಿಂದ 29ರ ತನಕ ಪೆರುಂಕಳಿಯಾಟ ನೆರವೇರಲಿದೆ.
       ಕಲ್ಯೋಟ್ ಶ್ರೀ ಭಗವತಿ ಕ್ಷೇತ್ರ ಕಳಗಂನ ವಿಶೇಷತೆ : ಉತ್ತರ ಕೇರಳದ ಯಾದವ(ಮಣಿಯಾಣಿ) ಕಳಗಂನಲ್ಲಿ ಕಲ್ಯೋಟ್ ಶ್ರೀ ಭಗವತಿ ಕ್ಷೇತ್ರ ಕಳಗಂ ಪ್ರಮುಖ ಸ್ಥಾನ ಪಡೆದಿದೆ. ಈ ಪೆರುಂಕಳಿಯಾಟದಲ್ಲಿ 150ಕ್ಕೂ ಹೆಚ್ಚು ಯಾದವ ತರವಾಡ್ ಮನೆತನಗಳು ಕೈಜೋಡಿಸಿವೆ. ಸಹಾಯ, ಸಹಕಾರ ನೀಡುತ್ತಿವೆ. ಇದರ ಜೊತೆ ಜೊತೆಗೆ ಪ್ರಮುಖ ನಾಯರ್ ತರವಾಡ್ ಮನೆತನಗಳು ಮತ್ತು ಕಲ್ಯೋಟ್ ಭಗವತಿ ಕ್ಷೇತ್ರ ಕಳಗಂ ಜೊತೆ ಹಿಂದಿನಿಂದಲೂ ನಂಟು ಹೊಂದಿರುವ ಹಲವು ಮನೆತನಗಳು ಮತ್ತು ತರವಾಡ್ ಪ್ರತಿನಿ„ಗಳು ಈ ಮಹೋತ್ಸವಕ್ಕೆ ಕೊಡುಗೆ ನೀಡುತ್ತಿದ್ದಾರೆ.
      ಕಾಸರಗೋಡು ತಾಲೂಕಿನಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಮಣಿಯಾಣಿ ಸಮುದಾಯಕ್ಕೆ ಈ ಪೆರುಂಕಳಿಯಾಟ ಒಂದು ಅವಿಸ್ಮರಣೀಯ ಘಟನೆಯಾಗಲಿದೆ. ಹಲವು ಶತಮಾನಗಳ ಹಿಂದೆ ನಡೆದಿತ್ತು ಎಂಬುದನ್ನು ಕೇಳಿ ತಿಳಿದಿದ್ದವರಿಗೆ ಈ ಅಪರೂಪದ ಘಟನೆಯನ್ನು ಕಣ್ಣಾರೆ ವೀಕ್ಷಿಸುವ ಅದೃಷ್ಟ ಒಲಿದು ಬಂದಿದೆ.
ಪೆರುಂಕಳಿಯಾಟ ಹಲವು ಸಂಕೀರ್ಣ ಹಾಗೂ ವಿಶಿಷ್ಟವಾದ ವೈದಿಕ ವಿಧಿವಿಧಾನಗಳ ಆಗರವೂ ಆಗಿದೆ. ಬ್ರಹ್ಮ ಶ್ರೀ ಕೇಶವ ತಂತ್ರಿ ಮತ್ತು ಕೃಷ್ಣದಾಸ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿ„ವಿಧಾನ ನೆರವೇರಲಿದೆ. 2019 ಡಿಸೆಂಬರ್ 23ರಿಂದ 29ರ ತನಕ ಇದು ನಡೆಯಲಿದೆ.
      ದೈವಸ್ಥಾನದ ಪ್ರತಿರೂಪ : ಪೆರುಂಕಳಿಯಾಟ ಮಹೋತ್ಸವಕ್ಕೆ ಈಗಿರುವ ದೈವಸ್ಥಾನದ ಪ್ರತಿರೂಪವನ್ನು ಬಿದಿರಿನಿಂದ ನಿರ್ಮಿಸಲಾಗಿದೆ. ಇದು ಈ ಕಳಿಯಾಟದ  ಪ್ರಮುಖ ಆಕರ್ಷಣೆಯಾಗಿದೆ. ಪೆÇಟ್ಟನ್ ದೈವ, ಗುರು ದೈವ, ರಕ್ತ ಚಾಮುಂಡಿ, ಬೈರವನ್,  ರಕ್ತೇಶ್ವರಿ ಹೀಗೆ ಸುಮಾರು 52 ದೈವಗಳ ದರ್ಶನ ಭಾಗ್ಯ ಭಕ್ತರಿಗೆ ದೊರೆಯಲಿದೆ.
ಅಮ್ಮನಿಗೆ ಮಾಂಗಲ್ಯ ಸೂತ್ರ ಧಾರಣೆ ಈ  ಪೆರುಂಕಳಿಯಾಟದ ಪ್ರಮುಖ ಕಾರ್ಯಕ್ರಮವಾಗಿದೆ.  ಡಿಸೆಂಬರ್ 29ರಂದು ಬೆಳಿಗ್ಗೆ  ಸಂಗ್ರಹಿಸಲಾದ 101 ಕಟ್ಟಿಗೆ ತುಂಡುಗಳಿಗೆ ಅಗ್ನಿ ಸ್ಪರ್ಶ ಬಳಿಕ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ. ಕಲ್ಯೋಟ್ ಭಗವತಿ ಅಮ್ಮನವರ ತಿರುಮುಡಿ ಮೇಲ್ಮುಖವಾಗಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries