ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.1 ರಿಂದ 3 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಷಷ್ಠೀ ಮಹೋತ್ಸವ ನಡೆಯಲಿದೆ.
ಡಿ.1 ರಂದು ಪೂರ್ವಾಹ್ನ 8.30 ಕ್ಕೆ ಪವಮಾನ ಹಾಗು ಪಂಚಾಮೃತ ಅಭಿಷೇಕ, ದೈವಗಳಿಗೆ ತಂಬಿಲ, ನಾಗ ತಂಬಿಲ, 10 ಕ್ಕೆ ಯಕ್ಷಗಾನ ತಾಳಮದ್ದಳೆ, 11 ಕ್ಕೆ ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 1.30 ಕ್ಕೆ ಅನ್ನಸಂತರ್ಪಣೆ, 2 ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 8 ರಿಂದ ಕಾಣಿಕೆ ಕಾಯಿ ಇಟ್ಟು ಪಂಚಮಿ ಉತ್ಸವ, ತರಕಾರಿ ಹೆಚ್ಚುವುದು. 10 ಕ್ಕೆ ನಾಟಕ ಪ್ರದರ್ಶನ ನಡೆಯುವುದು.
ಡಿ.2 ರಂದು ಪೂರ್ವಾಹ್ನ 7.30 ಕ್ಕೆ ಪವಮಾನ ಅಭಿಷೇಕ, ರುದ್ರಾಭಿಷೇಕ, ನವಕ ಕಲಶಾಭಿಷೇಕ, ತುಲಾಭಾರ ಸೇವೆ, 11.30 ರಿಂದ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ, 1.30 ಕ್ಕೆ ಅನ್ನಸಂತರ್ಪಣೆ, ಸಂಜೆ 6 ಕ್ಕೆ ಕೂಟತ್ತಜೆ ಅರಸು ದೈವಗಳಿಗೆ ಬಜಕಟ್ಟೆಯಲ್ಲಿ ಸ್ವಾಗತ, ರಾತ್ರಿ 7 ಕ್ಕೆ ಭಜನಾ ಕಾರ್ಯಕ್ರಮ, 8 ಕ್ಕೆ ಬಯ್ಯನ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ಸುಡುಮದ್ದು ಸೇವೆ, ಬಟ್ಟಲು ಕಾಣಿಕೆ, 11 ರಿಂದ ಯಕ್ಷಗಾನ ಬಯಲಾಟ, ರಾತ್ರಿ 1 ಕ್ಕೆ ರಂಗ ಪೂಜೆ ಜರಗಲಿದೆ.
ಡಿ.3 ರಂದು ಬೆಳಗ್ಗೆ 9 ಕ್ಕೆ ಬೆಳಗಿನ ಬಲಿ ಹೊರಡುವುದು, ಬಲಿ ಉತ್ಸವದಲ್ಲಿ ಕೂಟತ್ತಜೆ, ಅರಸು ದೈವಂಗಳ ದೇವರ ಭೇಟಿ, ಬಟ್ಟಲು ಕಾಣಿಕೆ, ಮಧ್ಯಾಹ್ನ 12 ಕ್ಕೆ ನವಕ ಕಲಶಾಭಿಷೇಕ ಮಹಾಪೂಜೆ, ಸಂಪೆÇ್ರೀಕ್ಷಣೆ, ಮಹಾಮಂತ್ರಾಕ್ಷತೆ, 1.30 ಕ್ಕೆ ಅನ್ನಸಂತರ್ಪಣೆ ನಡೆಯುವುದು.

