ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ತೆಂಗಿನಕಾಯಿ ಗಣಹೋಮ ಮತ್ತು ಶತರುದ್ರಾಭಿಷೇಕವು ನ.25 ಸೋಮವಾರ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಗಣಪತಿ ಹವನ ಆರಂಭವಾಗಲಿದ್ದು ನಂತರ ಶತರುದ್ರಾಭಿಷೇಕ ನಡೆಯಲಿದೆ. ಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸುವಂತೆ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.