ಮಂಜೇಶ್ವರ: ತೂಮಿನಾಡು ಅರಬ್ ರೈಡರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೆನಪೋಯ ರಕ್ತನಿಧಿ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಶನಿವಾರ ನಡೆಯಿತು.
ತೂಮಿನಾಡು ಅಲ ಫತಾಹ್ ಜುಮಾ ಮಸೀದಿ ಅಂಗಣದಲ್ಲಿ ಕ್ಲಬ್ ಅಧ್ಯಕ್ಷ ಯಾಯ್ಯಾ ತೂಮಿನಾಡು ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಮಸೀದಿ ಖತೀಬರಾದ ಅಬ್ದುಲ್ ರಹ್ಮಾನ್ ಹರ್ಷಿದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅತ್ಯಂತ ಶ್ರೇಷ್ಠ ದಾನಗಳಲ್ಲಿ ರಕ್ತದಾನವೂ ಒಂದಾಗಿದೆ. ಎಲ್ಲಾ ಧರ್ಮಗಳಲ್ಲೂ ರಕ್ತದಾನಕ್ಕೆ ಪ್ರತ್ಯೇಕವಾದ ಮಹತ್ವವನ್ನು ನೀಡಿದೆ. ಪವಿತ್ರವಾದ ಖುರಾನಿನಲ್ಲೂ ಕೂಡಾ ಈ ದಾನದಿಂದ ಸಿಗುವ ಪ್ರತಿಫಲದ ಬಗ್ಗೆ ಅರ್ಥವತ್ತಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬ್ಲಡ್ ಡೋನರ್ಸ್ ತಂಡದ ಸಿದ್ದೀಖ್ ಮಂಜೇಶ್ವರ, ನವಾಜ್ ಕಲ್ಲರಕೋಡಿ, ಫಾರೂಕ್, ಅರಬ್‍ರೈಡರ್ಸ್‍ನ ಸಿದ್ದೀಖ್ ತಂಙಳ್, ರಜಾಕ್ ಎಂ ಬಿ, ಇಲ್ಯಾಸ್, ಸತ್ತಾರ್, ಅಶ್ರಫ್ ಕೊಯಿನ್ನೂರು ಮೊದಲಾದವರು ಉಪಸ್ಥಿತರಿದ್ದರು.
ರಕ್ತದಾನಗೈಯ್ಯಲು ಶಿಬಿರಕ್ಕೆ ಯುವಕರೊಂದಿಗೆ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


