HEALTH TIPS

ರಸ್ತೆಯಲ್ಲಿ ಬಿದ್ದು ಸಿಕ್ಕಿದ ನಗದು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ


     ಪೆರ್ಲ:ರಸ್ತೆಯಲ್ಲಿ ಬಿದ್ದು ಸಿಕ್ಕಿದ 10,500 ನಗದು ವಾರಿಸುದಾರ ಅಶ್ರಫ್ ಎಂಬವರಿಗೆ ಹಿಂದಿರುಗಿಸುವ ಮೂಲಕ ಬೆದ್ರಂಪಳ್ಳ ನಿವಾಸಿ ಸತೀಶ್ ಅಲಾರ್ ಪ್ರಾಮಾಣಿಕತೆ ಮೆರೆದಿದ್ದಾರೆ.
    ಕಳೆದ ಶನಿವಾರ ಸತೀಶ್ ಅಲಾರ್ ಕಾರಿನಲ್ಲಿ  ಪೆರ್ಲದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಪೆರ್ಲದಿಂದ ಕೂರಿಪ್ಪುಡೆ ಈ ಹಿಂದಿನ ಮಾರಾಟ ತೆರಿಗೆ ಚೆಕ್ ಪೆÇೀಸ್ಟ್ ನಡುವೆ ರಸ್ತೆಯಲ್ಲಿ ನಗದು, ಲೆಕ್ಕ ಪತ್ರ ಕಾಗದ ಬಿದ್ದು ಸಿಕ್ಕಿದೆ. ತಕ್ಷಣ ದೂರವಾಣಿ ಸಂಖ್ಯೆ, ಇತರ ಸಂಪರ್ಕ ಮಾಹಿತಿಗೆ ತಡಕಾಡಿದರೂ ಯಾವುದೇ ಮಾಹಿತಿ ಕಂಡು ಬರದ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತ ಅಜಿತ್ ಸ್ವರ್ಗ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಅಜಿತ್ ತಕ್ಷಣ ತಮ್ಮ ಫೇಸ್ ಬುಕ್ ಖಾತೆ, ವಾಟ್ಸಪ್ಪ್ ಗುಂಪುಗಳಲ್ಲಿ ನಗದು ಬಿದ್ದು ಸಿಕ್ಕಿರುವ ಮಾಹಿತಿ ಹಂಚಿದ್ದು ಹಲವಾರು  ಗ್ರೂಪ್ ಗಳಲ್ಲಿ ಶೇರ್ ಪಡೆದಿದೆ.
    ಹಣ ಕಳೆದು ಕೊಂಡ ಅಶ್ರಫ್ ಅಮೆಕ್ಕಳದ ಬಾಡಿಗೆ ಸಮುಚ್ಚಯದಲ್ಲಿ ವಾಸವಾಗಿದ್ದು ಸ್ಥಳೀಯ ಕಲ್ಲು ಕೋರೆಯ ಮೇಲ್ನೋಟ ವಹಿಸುತ್ತಿದ್ದಾರೆ. ಶನಿವಾರ ಕಲೆಕ್ಷನ್ ಹಣವನ್ನು ಮಾಲಿಕರಿಗೆ ನೀಡಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಣ ನಷ್ಟಗೊಂಡಿದೆ.ಅಶ್ರಫ್ ಪೆರ್ಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರಿತ ಜೀಪ್ ಚಾಲಕ ಸೂಪಿ ಅವರೊಂದಿಗೆ ನಗದು ಹುಡುಕಾಡಿದ್ದಾರೆ. ಪೆರ್ಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಂಪಿನಲ್ಲೂ ನಗದು ಹಣ ದೊರೆತ ಮಾಹಿತಿ ರವಾನೆಯಾಗಿದ್ದು ಸಿಬ್ಬಂದಿಗಳು ಮಂಗಳವಾರ ಸೂಪಿ ಅವರಲ್ಲಿ ಈ ಬಗ್ಗೆ ವಿಚಾರಿಸಿದ್ದು ಸೂಪಿ ಅಜಿತ್ ಹಾಗೂ ಬಳಿಕ ಸತೀಶ್ ಅವರನ್ನು ಸಂಪರ್ಕಿಸಿದ್ದಾರೆ. ಅಶ್ರಫ್ ನಗದು, ಹಾಗೂ ಲೆಕ್ಕ ಪತ್ರಗಳ ಸೂಕ್ತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸತೀಶ್ ಅಲಾರ್ ನಗದು ಹಿಂತಿರುಗಿಸಿದ್ದಾರೆ.ಅಶ್ರಫ್ ಹಾಗೂ ಊರವರು ಸತೀಶ್ ಅಲಾರ್ ಅವರ ಪ್ರಾಮಾಣಿಕತೆಯನ್ನು  ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries